ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಬಂದಿರುವ ನಟ ದರ್ಶನ್ ಸದ್ಯ ತಮ್ಮ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಫ್ಯಾಮಿಲಿ ಜತೆ ರಿಲ್ಯಾಕ್ಸ್ ಆಗುತ್ತಿದ್ದಾರೆ.
ಈಚೆಗೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಹಾಗೂ ಸಹೋದರನ ಕುಟುಂಬದ ಜತೆಗೆ ಅದ್ಧೂರಿಯಾಗಿ ದರ್ಶನ್ ಸಂಕ್ರಾಂತಿ ಆಚರಿಸಿದ್ದರು. ಈ ಫೋಟೋಗಳು ಕೂಡಾ ವೈರಲ್ ಆಗಿತ್ತು.
ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಅವರು ಸದ್ಯ ಫಾರ್ಮ್ ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ಪತ್ನಿ ವಿಜಯಲಕ್ಷ್ಮಿ ಅವರು ರೋಮ್ಯಾಂಟಿಕ್ ಹಾಡಿನೊಂದಿಗೆ ಫಾರ್ಮ್‌ಹೌಸ್‌ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಂಜೆ ವೇಳೆ ಫಾರ್ಮ್‌ಹೌಸ್‌ನಲ್ಲಿ ಕುಳಿತು ಪ್ರಾಣಿಗಳ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ ಅದಕ್ಕೆ ಕನ್ನಡದ ಜೀವ ಹೂವಾಗಿದೆ, ಭಾವ ಜೇನಾಗಿದೆ ಹಾಡನ್ನು ಹಾಕಿದ್ದಾರೆ.
ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ತಮ್ಮ ಬಾಸ್ ಹಾಗೂ ಅತ್ತಿಗೆ ಖುಷಿ ಖುಷಿಯಲ್ಲಿ ಫಾರ್ಮ್‌ಹೌಸ್‌ನಲ್ಲಿ ಸಮಯಕಳೆಯುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಹೀಗೇ ಯಾವತ್ತೂ ಖುಷಿಯಾಗಿರಿ ಎಂದು ಬರೆದಿದ್ದಾರೆ.