Select Your Language

Notifications

webdunia
webdunia
webdunia
Sunday, 23 February 2025
webdunia

ಕೈತಪ್ಪಿದ ಬಿಗ್‌ಬಾಸ್ ವಿನ್ನರ್ ಟ್ರೋಫಿ: ಸುದೀಪ್ ಮೇಲೆ ರೀವೆಂಜ್ ತೆಗೆದ್ರಾ ತ್ರಿವಿಕ್ರಮ್, ವೈರಲ್ ವಿಡಿಯೋ

BigBoss Season 11 Grand Finale, Kiccha Sudeep And Trivikram AI Video, Runner Trivikram AI Video Viral

Sampriya

ಬೆಂಗಳೂರು , ಗುರುವಾರ, 30 ಜನವರಿ 2025 (16:25 IST)
Photo Courtesy X
ಬಿಗ್‌ಬಾಸ್ ಸೀಸನ್‌ 11 ಮುಗಿದರೂ ಸ್ಪರ್ಧಿಗಳ ಮೇಲಿನ ಕ್ರೇಜ್ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್‌ ಗ್ರ್ಯಾಂಡ್‌ ಫಿನಾಲೆ ವೇದಿಕೆಯಲ್ಲಿನ ಎಐ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಸುದೀಪ್ ಅವರು ವಿನ್ನರ್ ಆಗಿ ಹನುಮಂತರನ್ನು ಘೋಷಿಸಿದಾಗ ತ್ರಿವಿಕ್ರಮ್ ಅವರು ಕಿಚ್ಚ ಸುದೀಪ್ ಅವರ ಮೇಲೆ ಎಗರುವ ಹಾಗೇ ಎಐ ವಿಡಿಯೋವನ್ನು ಮಾಡಲಾಗಿದೆ.  ಸುದೀಪ್ ಅವರ ಮೇಲೆ ತ್ರಿವಿಕ್ರಮ್ ರಿವೇಂಜ್ ತೆಗೆದುಕೊಳ್ಳುತ್ತಿರುವ ಹಾಗೇ ಎಐ ವಿಡಿಯೋವನ್ನು ನಿರ್ಮಿಸಲಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಹೆಚ್ಚಿನವರು ತ್ರಿವಿಕ್ರಮ್ ಅವರು ವಿನ್ನರ್ ಆಗುತ್ತಾರೆ ಎಂದು ನಂಬಿದ್ದರು. ಆದರೆ ಹಳ್ಳಿ ಹೈದ ಹನುಮಂತು ಅತೀ ಹೆಚ್ಚು ವೋಟ್ ಪಡೆದು ಹೊಸ ದಾಖಲೆ ನಿರ್ಮಿಸಿ, ಟ್ರೋಫಿ  ಕೈಹಿಡಿದರು.

ತ್ರಿವಿಕ್ರಮ್ ವಿನ್ನರ್ ಆಗದಿರುವುದಕ್ಕೆ ಅವರ ತಾಯಿ ಕೂಡಾ ಅಸಮಾಧಾನ ಹೊರಹಾಕಿದ್ದರು. ಕ್ರಿಕೆಟ್ ಅಖಾಡದಲ್ಲಿ ಸುದೀಪ್ ಹಾಗೂ ತ್ರಿವಿಕ್ರಮ್ ಒಳ್ಳೆಯ ಸ್ನೇಹಿತರಾಗಿದ್ದರು.

ಈ ಬಾರಿ ಗೆಲುವು ತ್ರಿವಿಕ್ರಮ್ ಅವರದ್ದೇ ಎಂದು ಹೇಳಲಾಗಿತ್ತು. ಆದರೆ ಹನುಮಂತು ವಿನ್ ಆಗಿದ್ದಾರೆ. ಸುದೀಪ್ ಅವರ ಮೇಲೆ ತ್ರಿವಿಕ್ರಮ್ ರಿವೇಂಜ್ ತೆಗೆದುಕೊಳ್ಳುತ್ತಿರುವ ಹಾಗೇ ವಿಡಿಯೋವನ್ನು ಹರಿಬಿಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

BOYS vs GIRLS: ಟಾಸ್ಕ್ ಮಾಸ್ಟರ್ ಭವ್ಯಾ ಎಲ್ಲಿ ಎಂದ ಅಭಿಮಾನಿಗಳು