ಬೆಂಗಳೂರು: ಇದೇ 15 ಹಾಗೂ 16ರಂದು ನಟ ಡಾಲಿ ಧನಂಜಯ್ ಅವರು ಡಾ.ಧನ್ಯತಾ ಅವರನ್ನು ಕೈಹಿಡಿಯಲಿದ್ದಾರೆ.  ತನ್ನ ಮದುವೆಗೆ ಸಿನಿಮಾ ಗಣ್ಯರನ್ನು ಹಾಗೂ ರಾಜಕೀಯ ಗಣ್ಯರನ್ನು ಡಾಲಿ ಧನಂಜಯ್ ಅವರು ಆಹ್ವಾನಿಸಿದ್ದಾರೆ.
 
									
			
			 
 			
 
 			
			                     
							
							
			        							
								
																	ಇದೀಗ ಪುಷ್ಪ, ಪುಷ್ಪ 2 ಸಿನಿಮಾದಲ್ಲಿ ಡಾಲಿ ನಟಿಸಿ ಸೈ ಎನಿಸಿಕೊಂಡಿರೋದ್ರಿಂದ ತಂಡದ ಜೊತೆ ಉತ್ತಮ ಒಡನಾಟ ಇದೆ. ಇದೀಗ ಪುಪ್ಪ ತಂಡವನ್ನು  ಧನಂಜಯ್ ಅವರು ಆಹ್ವಾನಿಸಿದ್ದಾರೆ.  ಹೈದಾರಾಬಾದ್‌ಗೆ ತೆರಳಿ ಸಿನಿಮಾದ ನಟ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್  ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ  ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
									
										
								
																	ಭೇಟಿಯಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇನ್ನೂ ಇದೇ ಫೆ.15 ಹಾಗೂ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಡಾಲಿ ಹಸೆಮಣೆ ಏರಲಿದ್ದಾರೆ. ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿರುವ ಈ ಮದುವೆಗೆ ರಾಜಕೀಯ ಗಣ್ಯರಿಗೆ ಹಾಗೂ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಬರಲಿದ್ದಾರೆ.