Select Your Language

Notifications

webdunia
webdunia
webdunia
webdunia

ಅಭಿಮಾನಿಗಳಲ್ಲಿ ದಿಢೀರನೇ ಕ್ಷಮೆ ಕೇಳಿದ ದರ್ಶನ್: ಜೈಲಿಂದ್ದ ಬಂದ ಬಳಿಕ ದಾಸನ ಮೊದಲ ಬಿಚ್ಚು ಮಾತು

Actor Darshan Thoogudeep, Actress Rakshita Pream, Darshan Birthday

Sampriya

ಬೆಂಗಳೂರು , ಶನಿವಾರ, 8 ಫೆಬ್ರವರಿ 2025 (11:01 IST)
Photo Courtesy X
ಬೆಂಗಳೂರು:  ಇದೇ 16ರಂದು ನಟ ದರ್ಶನ್ ಅವರು 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲಿದ್ದಾರೆ. ಈಗಾಗಲೇ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡುವ ಸಂಭ್ರಮದಲ್ಲಿದ್ದಾರೆ. ಆದರೆ ಇದೀಗ ದರ್ಶನ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಈ ಬಾರಿ ಬರ್ತಡೇ ಆಚರಿಸಲ್ಲ ಎಂದಿದ್ದಾರೆ. ಇದಕ್ಕೆ ಬೇರೇನೂ ಕಾರಣ ಅಲ್ಲ ನನ್ನ ಆರೋಗ್ಯ ಸಮಸ್ಯೆಯಿಂದ ನಾನು ಈ ಬಾರಿ ಬರ್ತಡೇಯನ್ನು ಆಚರಿಸುತ್ತಿಲ್ಲ. ಸುದೀರ್ಘವಾಗಿ ನನಗೆ ನಿಂತುಕೊಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ನಾನು ಬರ್ತಡೇಯನ್ನು ಆಚರಿಸುತ್ತಿಲ್ಲ. ನನ್ನ ಸೆಲೆಬ್ರಿಟಿಸ್‌ಗಳಿಗೆ ಧನ್ಯವಾದ ಹೇಳಲು ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿದ್ದಾರೆ.

ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಸ್‌ಗಳಿಗೆ ನಮಸ್ಕಾರ ಹೇಳ, ಥ್ಯಾಂಕ್ಸ್ ಹೇಳಲ ಗೊತ್ತಾಗ್ತಿಲ್ಲ. ನೀವು ಕೊಟ್ಟ ಪ್ರೀತಿಗೆ ಏನೂ ಹೇಳಿದರೂ ಕಡಿಮೆನೆ. ನನ್ನ ಬರ್ತಡೇ ವಿಚಾರವಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ನನಗೂ ಎಲ್ಲರನ್ನೂ ಭೇಟಿಯಾಗಿ, ಥ್ಯಾಂಕ್ಸ್ ಹೇಳಬೇಕೆಂಬ ಆಸೆ ಇತ್ತು. ಈ ಸಲ ಆರೋಗ್ಯ ಸಮಸ್ಯೆಯಿಂದ ನನಗೆ ನಿಮ್ಮನ್ನು ಭೇಟಿಯಾಗಲು ಆಗುತ್ತಿಲ್ಲ.  ಇಂಜೆಕ್ಷನ್ ತೆಗೆದುಕೊಂಡ ತಕ್ಷಣ ನೋವು ಕಡಿಮೆಯಾಗುತ್ತದೆ. ಆದರೆ ಮತ್ತೇ ಆರೋಗ್ಯ ಸಮಸ್ಯೆ ಕಾಡುತ್ತದೆ. ಈ ಕಾರಣಕ್ಕಾಗಿ ನಾನು ಈ ಬಾರೀ ನಿಮ್ಮನ್ನು ಭೇಟಿಯಾಗಲು ಆಗುತ್ತಿಲ್ಲ ಎಂದಿದ್ದಾರೆ.

ಹೀಗಾಗಿ ನಾನು ನಿಮ್ಮ ಭೇಟಿ ಮಾಡಲು ಕಷ್ಟವಾಗಲಿದೆ ಎಂದು ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್ ಎಂದು ಹೇಳಿದ್ದಾರೆ.

ನನಗೆ ಯಾವ ಆರೋಗ್ಯ ಸಮಸ್ಯೆ ಇದೆ ಅಂತ ನಿಮಗೂ ಗೊತ್ತು. ಆಪರೇಷನ್‌ ನಾನು ಮಾಡಿಸಲೇ ಬೇಕು. ನಾನು ಕೆಲವು ಸಿನಿಮಾಗಳನ್ನ ಒಪ್ಪಿಕೊಂಡಿದ್ದೇನೆ. ಇಷ್ಟು ದಿನ ನನಗಾಗಿ ಕಾದಿದ್ದಾರೆ. ನಾನು ಸಹ ಈ ಸಂದರ್ಭದಲ್ಲಿ ನಿರ್ಮಾಪಕರಿಗೂ ಧನ್ಯವಾದವನ್ನ ಹೇಳುತ್ತೇನೆ. ನಾನು ಮುಂದಿನ ದಿನಗಳಲ್ಲಿ ನಿಮ್ಮನ್ನ ಭೇಟಿ ಮಾಡುತ್ತೇನೆ. ಖಂಡಿತವಾಗಿಯೂ ನಾನು ನಿಮ್ಮನ್ನ ಭೇಟಿ ಮಾಡೇ ಮಾಡುತ್ತೇನೆ. ನನ್ನ ಸೆಲೆಬ್ರಿಟಿಗಳು ಯಾವುದೇ ಕಾರಣಕ್ಕೂ ಯಾವುದೇ ಕಾರಣಕ್ಕೂ ಮಾತುಗಳಿಗೆ ಕಿವಿಕೊಡ್ಬೇಡಿ ಎಂದು ನಟ ದರ್ಶನ್‌ ಕಿವಿಮಾತು ಹೇಳಿದ್ದಾರೆ.

ನನಗೆ ಬೆನ್ನು ನೋವು ಇದೆ. ತುಂಬಾ ಹೊತ್ತು ನಿಲ್ಲೋಕೆ ಆಗಲ್ಲ. ಈ ಕಾರಣಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಇದೊಂದು ವರ್ಷ ಕ್ಷಮಿಸಿಬಿಡಿ. ನಿಮಗೆ ಧನ್ಯವಾದ ಹೇಳಬೇಕು ಎನ್ನುವ ಆಸೆ ನನಗೂ ಇದೆ ಎಂದು ನಟ ದರ್ಶನ್‌ ಅವರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಾನು ಮೂವರಿಗೆ ಧನ್ಯವಾದ ಹೇಳುತ್ತೇನೆ. ಮೊದಲು ಹೀರೋ ಧನ್ವೀರ್‌ಗೆ. ಪ್ರತಿ ಹಂತದಲ್ಲೂ ನನ್ನ ಜತೆ ಇದ್ದಿದ್ದಕ್ಕೆ. ಇನ್ನೊಂದು ನಟಿ ರಚಿತಾ ರಾಮ್ ಹಾಗೂ ರಕ್ಷಿತಾ ಪ್ರೇಮ್‌ಗೆ. ಇದರ ಜತೆ ನನ್ನ ಸೆಲೆಬ್ರಿಟಿಸ್‌ಗಳಿಗೆ ಎಷ್ಟೂ ಧನ್ಯವಾದಗಳು ಹೇಳಿದರು ಕಡಿಮೆನೇ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸಮಯದಲ್ಲಿ ರಿಯಲ್ ಹೀರೋ ಆಗಿದ್ದ ನಟ ಸೋನು ಸೂದ್‌ಗೆ ಬಂಧನ ಭೀತಿ