Select Your Language

Notifications

webdunia
webdunia
webdunia
webdunia

ಇದೇ ಕಾರಣಕ್ಕೆ ಮತ್ತೇ ಅಭಿಮಾನಿಗಳು ಮನಸ್ಸು ಕದಿಯುತ್ತಿದ್ದಾರೆ ರಶ್ಮಿಕಾ ಮಂದಣ್ಣ

Actress Rashmika Mandanna Work Dedication, Chaava Cinema, Rashmika Mandanna Leg Injury

Sampriya

ಬೆಂಗಳೂರು , ಗುರುವಾರ, 23 ಜನವರಿ 2025 (10:54 IST)
Photo Courtesy X
ಪುಪ್ಪಾ 2 ಗೆಲುವಿನಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ಕೆಲಸದ  ಮೇಲಿನ ಪ್ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೈಜ ಅಭಿನಯ ಮತ್ತು ತಮ್ಮ ನಡವಳಿಕೆಯಿಂದ ಅಪಾರ ಪ್ರೇಕ್ಷಕರನ್ನು ಆಕರ್ಷಿಸುತ್ತಲೇ ಇದ್ದಾರೆ. ಪುಷ್ಪಾ 2: ದಿ ರೂಲ್‌ನ ಯಶಸ್ಸಿನ ನಂತರ ಇದೀಗ ಛಾವಾ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ.

ಸದ್ಯ ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಅವರ ಕೆಲಸದ ಮೇಲಿನ ಪ್ರೀತಿಗೆ ಅವರ ಅಭಿಮಾನಿಗಳು ಮತ್ತೇ ಫಿದಾ ಆಗಿದ್ದಾರೆ.  ವರ್ಕೌಟ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ರಶ್ಮಿಕಾ, ಕುಂಟುತ್ತಲೇ ಛಾವಾ ಸಿನಿಮಾ ಟ್ರೇಲರ್ ಬಿಡುಗಡೆಗೆ ಬಂದಿರುವುದು ಸುದ್ದಿಯಾಗುತ್ತಿದೆ.

ಬದ್ಧತೆಯ ಸ್ಪೂರ್ತಿದಾಯಕ ಪ್ರದರ್ಶನದಲ್ಲಿ, ರಶ್ಮಿಕಾ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಗಾಲಿಕುರ್ಚಿಯಲ್ಲಿ ಛಾವಾ ಚಿತ್ರದ ಟ್ರೈಲರ್ ಬಿಡುಗಡೆಗಾಗಿ ಮುಂಬೈಗೆ ಹೋಗುತ್ತಿರುವುದನ್ನು ಗುರುತಿಸಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಅದಲ್ಲದೆ ವೇದಿಕೆ ಮೇಲೂ ಕಾಲು ನೋವನ್ನು ತೋರಿಸಿಕೊಳ್ಳದ ನಟಿ ಫುಲ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡರು. ಈ ವೇಳೆ ನಟಿಯ ಸಹಾಯಕ್ಕೆ ನಟ ವಿಕ್ಕಿ ಕೌಶಲ್ ಧಾವಿಸಿದರೂ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ನಟಿಗೆ ಕೆಲಸದ ಮೇಲೆ ಬದ್ಧತೆಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಿನಾಲೆಗೆ ಕೆಲ ದಿನಗಿರುವಾಗಲೇ ಸ್ಪರ್ಧಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಬಿಗ್‌ಬಾಸ್‌