ಮುಂಬೈ: ಚಾಕು ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಆಸ್ಪತ್ರೆಗೆ ದಾಖಲಿಸಿ, ಪ್ರಾಣಪಾಯದಿಂದ ಕಾಪಾಡಿದ್ದ ಆಟೋ ಚಾಲಕನನ್ನು ನಟ ಸೈಫ್ ಅಲಿ ಕಾನ್ ಭೇಟಿಯಾಗಿ ಧನ್ಯವಾದ ತಿಳಿಸಿದರು. ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಭೇಟಿಯಾದ ಸೈಫ್ ಕೆಲಹೊತ್ತು ಅವರ ಜತೆ ಮಾತುಕತೆ ನಡೆಸಿದರು.
ಅವರು ಜನವರಿ 16 ರ ಮುಂಜಾನೆ ಮನೆಯಲ್ಲಿ ಚಾಕುವಿನಿಂದ ಇರಿದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಜನವರಿ 21 ರಂದು ಡಿಸ್ಚಾರ್ಜ್ ಆಗುವ ಮೊದಲು ರಾಣಾ ಅವರನ್ನು ಸೈಫ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಭೇಟಿಯಾದರು.
ವೈರಲ್ ಆಗುತ್ತಿರುವ ಪೋಟೋದಲ್ಲಿ ಸೈಫ್ ಅಲಿ ಖಾನ್ ಅವರು ರಾಣಾ ಪಕ್ಕದಲ್ಲಿ ನಿಂತು ನಗುತ್ತಿರುವುದನ್ನು ಕಾಣಬಹುದು. ಅದಲ್ಲದೆ ರಾಣಾ ಹೆಗಲ ಮೇಲೆ ಕೈಯಿಟ್ಟು ಫೋಟೋಗೆ ಪೋಸ್ ನೀಡಿದ್ದಾರೆ.
ದರೋಡೆಕೋರನಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಸೈಫ್ ಅವರು 5 ದಿನಗಳ ಚಿಕಿತ್ಸೆ ಬಳಿಕ ನಿನ್ನೆ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.
ದಾಳಿಯ ನಂತರ, ಸೈಫ್ ಅಲಿ ಖಾನ್ ಅವರನ್ನು ಆಟೋ ರಿಕ್ಷಾ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ನಟನನ್ನು ಆಸ್ಪತ್ರೆಗೆ ಕರೆದೊಯ್ದ ಭಜನ್ ಸಿಂಗ್ ರಾಣಾಗೆ ಅವನು ಸೈಫ್ ಅಲಿ ಖಾನ್ ಎಂದು ತಿಳಿದಿರಲಿಲ್ಲ.
ಮಂಗಳವಾರ ನಟನನ್ನು ಭೇಟಿಯಾದ ನಂತರ, ಭಜನ್ ಸಿಂಗ್ ರಾಣಾ ಅವರು ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದರು ಮತ್ತು ನಟ ಮತ್ತು ಅವರ ಕುಟುಂಬ ಹೇಳಿದ್ದನ್ನು ಹಂಚಿಕೊಂಡರು.