ಬೆಂಗಳೂರು: ಬಿಗ್‌ಬಾಸ್ ಸೀಸನ್ ಕೊನೆಗೊಳ್ಳಲು ದಿನಗಣನೆ ಶುರುವಾಗಿದ್ದು, ಫಿನಾಲೆಗೆ ಭವ್ಯಾ, ತ್ರಿವಿಕ್ರಮ್, ರಜತ್, ಮಂಜು, ಹನಮಂತ, ಮೋಕ್ಷಿತಾ ಕಾಲಿಟ್ಟಿದ್ದಾರೆ.
ಈ ವಾರ ಯಾವುದೇ ಟಾಸ್ಕ್ ಇಲ್ಲದೆ ಬಿಗ್‌ಬಾಸ್ ಪಯಣದಲ್ಲಿ ಸ್ಪರ್ಧಿಗಳಿಗಾದ ನೋವು, ಖುಷಿ ಹಾಗೂ ಬೇಸರವನ್ನು ವ್ಯಕ್ತಪಡಿಸಲು ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಸ್ಪರ್ಧಿಗಳ ಅಭಿಮಾನಿಗಳು ಬಿಗ್‌ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.
ತಮ್ಮ ಅಭಿಮಾನಿಗಳ ಮುಖ ನೋಡಿ, ಅವರ ಹರ್ಷ ನೋಡಿ ಬಿಗ್‌ಬಾಸ್ ಸ್ಪರ್ಧಿಗಳು ಖುಷಿಯಾಗಿದ್ದಾರೆ. ಇನ್ನೂ ತಮ್ಮ ಅಭಿಮಾನಿಗಳ ಎದುರು ಬಿಗ್‌ಬಾಸ್ ಪಯಣದ ಬಗ್ಗೆ ಸ್ಪರ್ಧಿಗಳು ಮುಕ್ತವಾಗಿ ಮಾತನಾಡಿದ್ದಾರೆ.
ನಿಮ್ಮನ್ನೆಲ್ಲ ನೋಡಿ ಹೆದರಿಕೆ ಆಗ್ತೀದೆ ಎಂದು ಹನಮಂತು ಹೇಳಿದರೆ ಅಡೆ ತಡೆಗಳನ್ನು ದಾಟಿಕೊಂಡು ನಿ್ಮಮಲ್ಲಿ ಅಣ್ಣನೂ ತಮ್ಮನೂ ನುಗ್ಗಿಕೊಂಡು ಬಂದರೆ ಹೀಗಿರುತ್ತೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ.
ಮತ್ತೊಬ್ಬರು ನಾವು ಇಲ್ಲಿ ಬಂದಿರೋದು ಒಬ್ಬರೇ, ಗೆಲ್ಲೋದು ಒಬ್ಬರೇ ಎಂದು ಮೋಕ್ಷಿತಾ ಹೇಳಿದ್ದಾರೆ.