ಬೆಂಗಳೂರು: ಬಿಗ್‌ಬಾಸ್ ಸೀಸನ್ 11 ಗ್ಯ್ರಾಂಡ್ ಫಿನಾಲೆಗೆ ಕೇವಲ 2ವಾರ ಬಾಕಿ ಇದ್ದು ಇದೀಗ ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ನಡೆದ ಸ್ಪರ್ಧೆಯಲ್ಲಿ ಧನರಾಜ್ ಅವರ ಟೀಂನಲ್ಲಿದ್ದ ಚೈತ್ರಾ ಕುಂದಾಪುರ ಅವರು ಫಿನಾಲೆ ಟಿಕೆಟ್ ಅನ್ನು ಕಳೆದುಕೊಂಡಿದ್ದಾರೆ.
ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಧನರಾಜ್ ಕೂಡಾ ಫಿನಾಲೆ ಟಿಕೆಟ್ ಕಳೆದುಕೊಂಡಿದ್ದಾರೆ.. ಧನರಾಜ್ ಟೀಂನಲ್ಲಿದ್ದ ಗೌತಮಿ, ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಅವರು ಎದುರಾಳಿ ತಂಡವಾದ ಹನಮಂತು, ಭವ್ಯಾ, ತ್ರಿವಿಕ್ರಮ್, ಮೋಕ್ಷಿತಾ ಜತೆ ಫಿನಾಲೆ ಟಿಕೆಟ್‌ಗಾಗಿ ಸ್ಪರ್ಧೆ ನಡೆಸಿದೆ.
ಮೊದಲ ಸುತ್ತಿನಲ್ಲಿ ಧನರಾಜ್ ಅವರ ತಂಡ ಸೋತಿದ್ದ ಕಾರಣ ಒಬ್ಬರನ್ನು ಆಟದಿಂದ ಹಾಗೂ ಫಿನಾಲೆ ಟಿಕೆಟ್‌ನಿಂದ ಹೊರಗಿಡಲು ಸೂಚಿಸಲಾಯಿತು. ಈ ವೇಳೆ ಚೈತ್ರಾ ಅವರನ್ನು ಹೊರಗಿಡಲಾಯಿತು.
ಇಂದು ಬಿಡುಗಡೆಯಾದ ಪ್ರೊಮೊದಲ್ಲಿ ಮನೆಯ ಸದಸ್ಯರು ಧನರಾಜ್ ಅವರನ್ನು ಫಿನಾಲೆ ಟಿಕೆಟ್ ಪಡಯುವುದರಿಂದ ಹೊರಗಿಟ್ಟಿದ್ದಾರೆ. 'ಮೊದಲ ಮೂರು ವಾರ ಧನರಾಜ್ ಸರಿಯಾಗಿ ಆಡಲಿಲ್ಲ' ಎನ್ನುವ ಕಾರಣವನ್ನು ಗೌತಮಿ ನೀಡಿದ್ದಾರೆ. ಇತ್ತ 'ಮಾರಿ ಹಬ್ಬದ ಜಾತ್ರೆಯಲ್ಲಿ ಬಲಿಕೊಟ್ಟಾಯ್ತು' ಎಂದು ಭವ್ಯಾ ವ್ಯಂಗ್ಯವಾಡಿದ್ದಾರೆ. 'ಗೌತಮಿಗಿಂತ ಧನರಾಜ್ ಕಳೆಪಯಾಗಿದ್ದಾರಾ' ಎಂದು ರಜತ್ ಪ್ರಶ್ನಿಸಿದ್ದಾರೆ.
ಟಾಸ್ಕ್ ಗೆದ್ದು ತ್ರಿವಿಕ್ರಮ್ ನೇರವಾಗಿ ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ.
ಇತ್ತ, 'ಫಿನಾಲೆ ಟಿಕೆಟ್ ಕಳೆದುಕೊಂಡ ಚೈತ್ರಾ, ಆಟವಾಡಲು ಬಿಡದೆ ಹೊರಗಿಟ್ಟದ್ದರು, ಈಗ ಆಟವಾಡಿದರೂ ನನ್ನನ್ನು ಪರಿಗಣಿಸಲಿಲ್ಲ' ಎಂದು ಕಣ್ಣೀರು ಹಾಕಿದ್ದಾರೆ.