ಬೆಂಗಳೂರು: ಇನ್ನೇನು ಬಿಗ್‌ಬಾಸ್ ಸೀಸನ್ 11 ಮುಗಿಯಲು ಮೂರು ವಾರಗಳು ಅಷ್ಟೇ ಬಾಕಿಯಿದೆ. ಇದಿಗ ದೊಡ್ಮನೆಯಲ್ಲಿ ಟಿಕೆಟ್ ಟು ಫಿನಾಲೆಗಾಗಿ ಒಂಭತ್ತು ಸ್ಪರ್ಧಿಗಳ ನಡುವೆ ಭಾರೀ ಪೈಪೋಟಿ ನಡೆದಿದೆ.
ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಹೇಳಿದಂತೆ ಈ ವಾರ ಒಬ್ಬರಿಗೆ ಡೈರೆಕ್ಟ್ ಫಿನಾಲೆಗೆ ಸ್ಪರ್ಧಿಯೊಬ್ಬರಿಗೆ ಟಿಕೆಟ್ ಸಿಗಲಿದೆ. ಅದರಂತೆ ಇದೀಗ ಟಿಕೆಟ್‌ಗಾಗಿ ಸ್ಪರ್ಧೆ ನಡೆಯುತ್ತಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಬಾಲ್ ಟಾಸ್ಕ್‌ನಲ್ಲಿ ಗುದ್ದಾಡಿದ್ದಾರೆ. ಅದಲ್ಲದೆ ತ್ರಿವಿಕ್ರಮ್ ವ್ಯಕ್ತಿತ್ವದ ವಿಚಾರದ ಬಗ್ಗೆ ಮಾತನಾಡುವಾಗ ಉಗ್ರಂ ಮಂಜು ಅವರು ನಿಮಗಿಂತ ಹನಮಂತು ಮೇಲಿದ್ದಾರೆ ಎಂದಿದ್ದಾರೆ.
ಇದಕ್ಕೆ ಕೋಪಗೊಂಡ ತ್ರಿವಿಕ್ರಮ್ ನೀವು ನನ್ನತ್ರ ವ್ಯಕ್ತಿತ್ವದ ಬಗ್ಗೆ ಮಾತಾಡ್ತಾ ಇದ್ದೀರಾ ಎಂದು ಜಗಳ ಮಾಡಿ, ಥೋ ಅಂತಾ ಉಗಿದಿದ್ದಾರೆ. ಇದರಿಂದ ಗುತ್ತಾಗುತ್ತೆ ನೀನು ಎಷ್ಟು ಶೇಕ್ ಆಗಿದ್ದೀಯ ಅಂತ ಎಂದು ಮಂಜಣ್ಣ ಕೌಂಟರ್ ಕೊಟ್ಟಿದ್ದಾರೆ. ಈ ವೇಳೆ ಮಂಜಣ್ಣನ ಮೇಲೆ ತ್ರಿವಿಕ್ರಮ್ ಏಕವಚನದಲ್ಲೇ ಜಗಳವಾಡಿದ್ದಾರೆ.
ಒಟ್ಟಾರೆ ಈ ವಾರ ಟಿಕೆಟ್‌ಗಾಗಿ ದೊಡ್ಮನೆಯಲ್ಲಿ ಮಾರಿಹಬ್ಬನೇ ನಡೆಯುತ್ತಿದೆ.