ಬೆಂಗಳೂರು: ನಟ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಒಂದಾದ ಮೇಲೊಂದರಂತೆ ಗುಡ್ ನ್ಯೂಸ್ ಸಿಗುತ್ತಿದೆ. ಈ ಬಾರಿ ಡೆವಿಲ್ ಬಗ್ಗೆ ಹೊಸ ಅಪ್ ಡೇಟ್ ಬಂದಿದೆ.
ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೆಲವು ತಿಂಗಳುಗಳ ಕಾಲ ಜೈಲು ಸೇರಿದ್ದಾಗ ಅಭಿಮಾನಿಗಳು ತೀರಾ ದುಃಖದಲ್ಲಿದ್ದರು. ಇನ್ನು, ಅವರು ಬೆನ್ನು ನೋವಿನಿಂದ ಬಳಲುತ್ತಿದ್ದ ಪರಿ ನೋಡಿ ಇನ್ನು ಸದ್ಯಕ್ಕೆ ಅವರ ಕಡೆಯಿಂದ ಸಿನಿಮಾ ಅಪ್ ಡೇಟ್ ಸಿಗದೇನೋ ಎಂಬ ಬೇಸರದಲ್ಲಿದ್ದರು.
ಆದರೆ ಇನ್ನೇನು ಅವರ ಹುಟ್ಟುಹಬ್ಬ ಬರುತ್ತಿದ್ದು ಇದೇ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಫೆಬ್ರವರಿ 16 ಕ್ಕೆ ದರ್ಶನ್ ಹುಟ್ಟುಹಬ್ಬವಿದೆ. ಈ ದಿನ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಕಾಟೇರದಂತಹ ಸಕ್ಸಸ್ ಸಿನಿಮಾ ಕೊಟ್ಟ ಬಳಿಕ ದರ್ಶನ್ ನಾಯಕರಾಗಿ ನಟಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಆದರೆ ಈ ಸಿನಿಮಾ ಚಿತ್ರೀಕರಣ ಹಂತದಲ್ಲಿರುವಾಗಲೇ ದರ್ಶನ್ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದರು. ಈ ಬಾರಿ ಅವರು ಹುಟ್ಟುಹಬ್ಬ ನಿಮ್ಮೊಂದಿಗೆ ಆಚರಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ ಆ ನಿರಾಸೆ ಮರೆಸಲು ಡೆವಿಲ್ ಟೀಸರ್ ಬರುತ್ತಿದೆ.