ಬೆಂಗಳೂರು: ಡಾಲಿ ಧನಂಜಯ್ ಮತ್ತು ಭಾವೀ ಪತ್ನಿ ಧನ್ಯತಾ ಇಂದು ತಮ್ಮ ಮದುವೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ ಧನಂಜಯ್ ಉತ್ತರ ನೋಡಿದರೆ ಮದುವೆಗೆ ಕರೆಯಲು ಪ್ರಯತ್ನಿಸಿದರೂ ದರ್ಶನ್ ಸಿಗಲಿಲ್ಲವೇ ಎಂಬ ಅನುಮಾನ ಮೂಡಿದೆ.
ನಟ ಡಾಲಿ ಧನಂಜಯ್ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಎಲ್ಲರಿಗೂ ಖುದ್ದಾಗಿ ಹೋಗಿ ತಾವೇ ಹಂಚಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ರಾಜಕೀಯ ಗಣ್ಯರು, ಸ್ಯಾಂಡಲ್ ವುಡ್ ನ ಈಗಿನ ಸ್ಟಾರ್ ನಟರೆಲ್ಲರಿಗೂ ಧನಂಜಯ್ ಖುದ್ದಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ.
ಆದರೆ ಇದುವರೆಗೆ ದರ್ಶನ್ ಗೆ ಆಹ್ವಾನ ನೀಡಿದ ಬಗ್ಗೆ ಸುದ್ದಿ ಬಂದಿರಲಿಲ್ಲ. ಹೀಗಾಗಿ ಇಂದು ಪತ್ರಿಕಾಗೋಷ್ಠಿಯಲ್ಲಿ ನೀವು ಎಲ್ಲರಿಗೂ ಆಹ್ವಾನ ಪತ್ರಿಕೆ ನೀಡಿದ್ದೀರಿ. ಆದರೆ ದರ್ಶನ್ ರನ್ನು ಆಹ್ವಾನಿಸಿಲ್ಲವೇ ಎಂದು ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಅವರು ಎಲ್ಲರನ್ನೂ ಕರೆದ ನಾನು ದರ್ಶನ್ ರನ್ನೂ ಸಂಪರ್ಕ ಮಾಡಲು ಪ್ರಯತ್ನ ಪಟ್ಟೇ ಪಟ್ಟಿರುತ್ತೇನೆ ಅಲ್ಲವೇ? ನನಗೆ ಸಾಧ್ಯವಾಗಲಿಲ್ಲ. ಹೀಗಾಗಿ ಖುದ್ದಾಗಿ ಆಹ್ವಾನಿಸಲು ಸಾಧ್ಯವಾಗಿಲ್ಲ. ಆದರೆ ಈ ಮೂಲಕವೂ ನಾವು ಅವರನ್ನು ಮದುವೆಗೆ ಆಹ್ವಾನಿಸುತ್ತಿದ್ದೇವೆ ಎಂದು ಬಹಿರಂಗವಾಗಿ ಆಮಂತ್ರಿಸಿದ್ದಾರೆ. ಆದರೆ ಡಾಲಿ ಧನಂಜಯ್ ಮಾತಿನ ಧಾಟಿ ನೋಡಿದರೆ ದರ್ಶನ್ ಅವರ ಕೈಗೆ ಸಿಗಲಿಲ್ಲವೇ ಎಂಬ ಅನುಮಾನ ಮೂಡಿಸುವಂತಿತ್ತು.