ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾದಲ್ಲಿ ನಯನತಾರಾ ನಟಿಸುತ್ತಿರುವುದು ಕನ್ ಫರ್ಮ್ ಆಗಿದೆ. ಅವರು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದೀಗ ನಯನತಾರಾ ಬೆಂಗಳೂರಿಗೆ ಶೂಟಿಂಗ್ ಗಾಗಿ ಬಂದಿದ್ದಾರೆ. ಈ ಮೂಲಕ ಲೇಡಿ ಸೂಪರ್ ಸ್ಟಾರ್ ಟಾಕ್ಸಿಕ್ ಸಿನಿಮಾದ ಭಾಗವಾಗಿರುವುದು ಕನ್ ಫರ್ಮ್ ಆಗಿದೆ.
ಟಾಕ್ಸಿಕ್ ಸಿನಿಮಾದ ಒಂದು ಪೋಸ್ಟರ್, ಟೀಸರ್ ಬಿಟ್ಟಿರುವುದು ಬಿಟ್ಟರೆ ಚಿತ್ರತಂಡ ಬೇರೆ ಯಾವುದೇ ಅಪ್ ಡೇಟ್ ಇದುವರೆಗೆ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಸಿನಿಮಾದಲ್ಲಿ ಯಾವೆಲ್ಲಾ ಕಲಾವಿದರಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಟಾಕ್ಸಿಕ್ ಸಿನಿಮಾಗೆ ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿಯಾರಾ ಅಡ್ವಾಣಿ ಈಗಾಗಲೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ಯಶ್ ಗೆ ನಾಯಕಿ ಯಾರು ಎನ್ನುವುದು ಇನ್ನೂ ಕನ್ ಫರ್ಮ್ ಆಗಿಲ್ಲ.