ಬೆಂಗಳೂರು: ಕನ್ನಡ ಚಿತ್ರರಂಗದ ಬಾದ್ ಶಹಾ ಕಿಚ್ಚ ಸುದೀಪ್ ಬಣ್ಣದ ಲೋಕಕ್ಕೆ ಕಾಲಿಟ್ಟು 29 ವರ್ಷಗಳಾಗಿವೆ.ಕಿಚ್ಚ ಸುದೀಪ್ ಮತ್ತು ದರ್ಶನ್ ನಡುವೆ ಸೀನಿಯರ್ ಯಾರು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. 
									
			
			 
 			
 
 			
					
			        							
								
																	ಕಿಚ್ಚ ಸುದೀಪ್ ಹುಟ್ಟಿನಿಂದಲೇ ಶ್ರೀಮಂತ ಕುಟುಂಬದಿಂದಲೇ ಬಂದವರು. ಆದರೆ ಅವರ ತಂದೆ ಸಂಜೀವ್ ಸರೋವರ್ ಹೋಟೆಲ್ ಉದ್ಯಮಿಯಾಗಿದ್ದರೂ ಸಿನಿಮಾ ಮಂದಿ ಜೊತೆ ಒಡನಾಟವಿತ್ತು. ಡಾ. ರಾಜ್ ಕುಮಾರ್ ರಂತಹ ಲೆಜೆಂಡರಿ ನಟರ ಜೊತೆ ಸ್ನೇಹವಿತ್ತು.
									
										
								
																	ಆದರೂ ಸುದೀಪ್ ಗೆ ಬಣ್ಣದ ಬದುಕು ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಇಲ್ಲಿ ತಳವೂರಲು ಇತರೆ ನಟರಂತೆ ಅವರು ಕಷ್ಟಪಟ್ಟಿದ್ದರು. ತೀರಾ ತೆಳ್ಳಗೆ ಚಾಕಲೇಟ್ ಹೀರೋ ಥರಾ ಇದ್ದ ಅವರ ಜೊತೆ ಹೀರೋಯಿನ್ ಆಗಿ ಫೋಟೋ ಶೂಟ್ ಮಾಡಲೂ ಯಾರೂ ಮುಂದೆ ಬರಲಿಲ್ಲವಂತೆ. ಸೃಜನ್ ಲೋಕೇಶ್ ಸಹೋದರಿ ಪೂಜಾ ಲೋಕೇಶ್ ಜೊತೆ ಅವರು ಮೊದಲು ಫೋಟೋ ಶೂಟ್ ಮಾಡಿಸಿಕೊಂಡಿದ್ದರಂತೆ.
									
											
							                     
							
							
			        							
								
																	ಸುದೀಪ್ ಚಿತ್ರರಂಗಕ್ಕೆ ಬಂದ ಕಾಲಘಟ್ಟದಲ್ಲಿಯೇ ದರ್ಶನ್ ಕೂಡಾ ಚಿತ್ರರಂಗಕ್ಕೆ ಬಂದಿದ್ದರು. ಆದರೂ ಇವರಿಬ್ಬರಲ್ಲಿ ಸೀನಿಯರ್ ಯಾರು ಎಂಬ ಕುತೂಹಲ ನಿಮಗಿರಬಹುದು.
									
			                     
							
							
			        							
								
																	ವಯಸ್ಸು ಮತ್ತು ಮೊದಲು ಬಣ್ಣ ಹಚ್ಚಿದ ಸಮಯದ ಪ್ರಕಾರ ಕಿಚ್ಚ ಸುದೀಪ್ ಸೀನಿಯರ್ ಎನ್ನಬಹುದು. ದರ್ಶನ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು ಮೆಜೆಸ್ಟಿಕ್ ಸಿನಿಮಾ ಮೂಲಕ. ಈ ಸಿನಿಮಾ ಬಂದಿದ್ದು 2002 ರಲ್ಲಿ. ಸುದೀಪ್ 1997 ರಲ್ಲಿ ತಾಯವ್ವ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡಿದ್ದರು. ಬಳಿಕ 2000 ರಲ್ಲಿ ಅವರು ನಾಯಕನಾಗಿದ್ದ ಸ್ಪರ್ಶ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೀಗಾಗಿ ಕಿಚ್ಚನೇ ಸೀನಿಯರ್ ಎನ್ನಬಹುದು.