Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಪ್ರಕರಣದ ಬಳಿಕ ದರ್ಶನ್ ರಲ್ಲಿದೆ ಕಾಣ್ತಿದೆ ಈ ದೊಡ್ಡ ಬದಲಾವಣೆ

Darshan family

Krishnaveni K

ಬೆಂಗಳೂರು , ಗುರುವಾರ, 16 ಜನವರಿ 2025 (09:27 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಟ ದರ್ಶನ್ ಗೆ ಒಂದು ಪಾಠ ಕಲಿಸಿದಂತಿದೆ. ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ರಲ್ಲಿದೆ ಈ ಒಂದು ಬದಲಾವಣೆ ಕಾಣ್ತಿದೆ.

ನಟ ದರ್ಶನ್ ಈ ಮೊದಲು ಕೇವಲ ತಮ್ಮ ಫ್ರೆಂಡ್ಸ್ ಎಂದು ತಮ್ಮ ಒಂದಿಷ್ಟು ಬಳಗದ ಜೊತೆ ಮಾತ್ರ ಸುತ್ತುತ್ತಿದ್ದರು. ಅವರು ಕುಟುಂಬ ಸದಸ್ಯರ ಜೊತೆಗಿರುವ ಫೋಟೋಗಳು ಹೊರಗೆ ಬರುತ್ತಿದ್ದುದೇ ಅಪರೂಪ. ಆದರೆ ಈಗ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ.

ದರ್ಶನ್ ಜೈಲಿನಲ್ಲಿದ್ದಾಗಲೇ ಮಗನಿಗೆ ಇನ್ನು ಮುಂದೆ ಕೆಲವೊಬ್ಬರ ಸಹವಾಸ ಬಿಡುವುದಾಗಿ ಪ್ರಾಮಿಸ್ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅದೀಗ ನಿಜವಾಗಿರುವಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮೊನ್ನೆ ಸಂಕ್ರಾಂತಿ ದಿನ ತಮ್ಮ ಮಗ, ಪತ್ನಿ, ಸಹೋದರನ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಅವರೊಂದಿಗೆ ಆತ್ಮೀಯವಾಗಿ ಕಾಲ ಕಳೆಯುತ್ತಿರುವ ಫೋಟೋಗಳು ಎಲ್ಲರ ಗಮನ ಸೆಳೆದಿದೆ.

ನಿನ್ನೆ ಕೂಡಾ ತಮ್ಮ ಪತ್ನಿ, ಮಗನ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದಕ್ಕೆ ಮೊದಲು ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ಕೊಟ್ಟಾಗ ತಾಯಿ ಮತ್ತು ಕುಟುಂಬ ಸದಸ್ಯರೊಡನೆ ಕಾಲ ಕಳೆಯುತ್ತಿರುವ ಫೋಟೋಗಳು ವೈರಲ್ ಆಗಿದ್ದವು.

ಇಷ್ಟು ದಿನ ಕೇವಲ ತಮ್ಮದೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಸುತ್ತಾಡುತ್ತಿದ್ದ ದರ್ಶನ್ ಈಗ ಪಾಠ ಕಲಿತಂತಿದೆ. ಜೈಲಿನಿಂದ ಹೊರಬಂದ ಮೇಲೆ ತಮ್ಮ ಪತ್ನಿ, ಮಗ ಕುಟುಂಬದವರ ಜೊತೆಗೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Saif Ali Khan: ಕಳ್ಳರಿಂದ ಮನೆಕೆಲಸದವರನ್ನು ರಕ್ಷಿಸಲು ಹೀರೋ ರೀತಿ ನುಗ್ಗಿದ ಸೈಫ್ ಅಲಿ ಖಾನ್ ಗೆ ಎಲ್ಲೆಲ್ಲಿ ಗಾಯವಾಗಿದೆ