Select Your Language

Notifications

webdunia
webdunia
webdunia
webdunia

ಅಮ್ಮನ ಹುಟ್ಟುಹಬ್ಬಕ್ಕೆ ಹೊಸ ಯೋಜನೆ ಕೈಗೊಂಡ ನಟ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್

Sampriya

ಬೆಂಗಳೂರು , ಶನಿವಾರ, 30 ಆಗಸ್ಟ್ 2025 (18:02 IST)
Photo Credit X
ಬೆಂಗಳೂರು: ತಮ್ಮ ತಾಯಿಯ ಹುಟ್ಟು ಹಬ್ಬವನ್ನು ನಟ ಕಿಚ್ಚ ಸುದೀಪ್‌ ಅವರು ವಿಶೇಷವಾಗಿ ಆಚರಿಸಿದ್ದಾರೆ. 

ಈಚೆಗಷ್ಟೇ ಅಗಲಿರುವ ಅಮ್ಮನ ನೆನಪು ಸದಾ ಉಳಿಯಲೆಂದು ಅವರು ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ. ಅಮ್ಮನ ಹುಟ್ಟು ಹಬ್ಬದ ದಿನದಂದು ಕುಟುಂಬ ಸಮೇತ ಮರ ಬೆಳೆಸುವ ಸಂಕಲ್ಪವನ್ನು ಮಾಡಿದ್ದಾರೆ.

ಪ್ರತಿ ಮರಕ್ಕೂ ಒಂದು ಕಥೆ ಇದೆ. ಈ ಮರವು ನನ್ನ ಅಮ್ಮನ ಕಥೆ ಹೇಳಲಿ ಎಂದು ಭಾವುಕರಾಗಿ ಬರೆದುಕೊಂಡಿರುವ ಸುದೀಪ್, ಅಮ್ಮನ ಹುಟ್ಟು ಹಬ್ಬಕ್ಕೆ ಮರ ನೆಟ್ಟು ಭಾವುಕರಾಗಿದ್ದಾರೆ

ಇದೇ ಸೆಪ್ಟೆಂಬರ್ 2ಕ್ಕೆ ಸುದೀಪ್ ಕೂಡ ಹುಟ್ಟು ಹಬ್ಬವನ್ನು  ಆಚರಿಸಿಕೊಳ್ಳುತ್ತಿದ್ದು, ಅದು ಅಮ್ಮನು ಇಲ್ಲದ ಮೊದಲ ಹುಟ್ಟು ಹಬ್ಬ ಎಂದು ನುಡಿದಿದ್ದಾರೆ.

ಅಮ್ಮನ ಹೆಜ್ಜೆಗೆ ಹಸಿರು ಹೆಜ್ಜೆ ಅಭಿಯಾನದಡಿ ಸುದೀಪ್ ಗಿಡ ನೆಟ್ಟಿದ್ದು, ಈ ಅಭಿಯಾನ ನಿರಂತರವಾಗಿ ಇರಲಿದೆಯಂತೆ. ಈ ಅಭಿಯಾನಕ್ಕೆ ಸುದೀಪ್ ಸಹೋದರಿ ಮತ್ತು ಪತ್ನಿ ಕೂಡ ಸಾಥ್ ನೀಡಿದ್ದಾರೆ. ಎಲ್ಲರ ಅಮ್ಮನ ಹೆಸರಿನಲ್ಲಿ ಗಿಡ ನೆಟ್ಟು, ಅಮ್ಮನ ನೆನಪನ್ನು ಸದಾ ಹಸಿರಾಗಿ ಇರುವಂತೆ ನೋಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಕೈಚಳಕದಲ್ಲೇ ಸೆರೆಯಾಗಲಿದೆ ಬಿಗ್‌ಬಾಸ್ ಖ್ಯಾತಿಯ ಗೌತಮಿ ಜಾಧವ್ ಮುಂದಿನ ಸಿನಿಮಾ‌‌