Select Your Language

Notifications

webdunia
webdunia
webdunia
webdunia

ರೀಲ್ಸ್‌ಗಾಗಿ ಮಚ್ಚು ಹಿಡಿದ ಪ್ರಕರಣ: ಬಿಗ್‌ಬಾಸ್‌ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ಪೊಲೀಸ್‌ ಬುಲಾವ್‌

Kannada Bigg Boss

Sampriya

ಬೆಂಗಳೂರು , ಬುಧವಾರ, 16 ಏಪ್ರಿಲ್ 2025 (11:10 IST)
Photo Courtesy X
ಬೆಂಗಳೂರು: ರೀಲ್ಸ್‌ಗಾಗಿ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದ ಪ್ರಕರಣವು ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಅವರನ್ನು ಬೆಂಬಿಡದಂತೆ ಕಾಡುತ್ತಿದೆ.

ತಿಂಗಳ ಹಿಂದೆ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಖಾಸಗಿ ಕಾರ್ಯಕ್ರಮ ಮುಗಿದ ಬಳಿಕ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು.

 ಈ ವಿಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.

ವಿಚಾರಣೆ ವೇಳೆ ರೀಲ್ಸ್‌ಗೆ ಬಳಸಿದ್ದ ಮಚ್ಚು ಫೈಬರ್ ಎಂದು ಹೇಳಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಅದು ರಿಯಲ್ ಮಚ್ಚು ಎನ್ನುವುದು ಗೊತ್ತಾಗಿತ್ತು. ಇಲ್ಲಿಯವರೆಗೂ ರೀಲ್ಸ್‌ಗೆ ಬಳಸಿದ ಅಸಲಿ ಮಚ್ಚನ್ನು ಪೊಲೀಸರಿಗೆ ಕೊಟ್ಟಿರಲಿಲ್ಲ.

ಹಾಗಾಗಿ ಆ ಮಚ್ಚಿನ ಬಗ್ಗೆ ಮಾಹಿತಿ ನೀಡುವಂತೆ ರಜತ್‌ಗೆ ಮತ್ತೆ ನೋಟಿಸ್ ನೀಡಿದ್ದು, ಇಂದು 11 ಗಂಟೆಗೆ ವಿಚಾರಣೆ ಬರಲು ಸೂಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿವುಡ್‌ನಲ್ಲಿ ಸ್ಟಾರ್ ವಾರ್‌ ಜೋರು: ಥಿಯೇಟರ್‌ನಲ್ಲೇ ಹೊಡೆದಾಡಿಕೊಂಡ ಸ್ಟಾರ್‌ ನಟರ ಅಭಿಮಾನಿಗಳು