ಚೆನ್ನೈ: ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ ಪರಭಾಷೆಯ ಚಿತ್ರರಂಗದಲ್ಲೂ ಸ್ಟಾರ್ ವಾರ್ ಜೋರಾಗಿದೆ. ಕಾಲಿವುಡ್‌ನಲ್ಲೂ ಇದು ಆಗಾಗ ಸದ್ದು ಮಾಡುತ್ತಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ನಟರಾದ ಅಜಿತ್ ಕುಮಾರ್ ಹಾಗೂ ದಳಪತಿ ವಿಜಯ್ ಅವರ ಅಭಿಮಾನಿಗಳ ನಡುವೆ ನಡೆದ ಇತ್ತೀಚಿನ ಗಲಾಟೆ.
ಅಜಿತ್ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಪ್ರದರ್ಶನದ ವೇಳೆ ದಳಪತಿ ವಿಜಯ್ ಹಾಗೂ ಅಜಿತ್ ಕುಮಾರ್ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ಕೇರಳದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೊ ವೈರಲ್ ಆಗಿದೆ.
ಏಪ್ರಿಲ್ 10ರಂದು ಅಜಿತ್ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಬಿಡುಗಡೆ ಆದಿದೆ. ಕೇರಳದ ಪಲಕ್ಕಾಡ್ನಲ್ಲಿರುವ ಸತ್ಯ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿತ್ತು. ಆಗ ಫ್ಯಾನ್ಸ್ ನಡುವೆ ಕಿರಿಕ್ ಶುರುವಾಯಿತು. ದಳಪತಿ ವಿಜಯ್ ಫ್ಯಾನ್ಸ್ ಹಾಗೂ ಅಜಿತ್ ಕುಮಾರ್ ಫ್ಯಾನ್ಸ್ ಪರಸ್ಪರ ಬೈಯ್ದುಕೊಂಡರು. ನಂತರ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು.
ಪರಿಸ್ಥಿತಿ ಕೈ ಮೀರಿದಾಗ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಯಿತು. ಅಭಿಮಾನಿಗಳ ನಡುವೆ ಮಾರಾಮಾರಿ ನಡೆಯಿತು. ಈ ಗಲಾಟೆಯಲ್ಲಿ ಚಿತ್ರಮಂದಿರದ ಆಸನಗಳಿಗೆ ಹಾನಿ ಆಯಿತು. ಪರದೆ ಇರುವ ಸ್ಥಳದಲ್ಲೂ ಹಾನಿ ಆಗಿದೆ ಎಂದು ವರದಿ ಆಗಿದೆ.
ಗುಡ್ ಬ್ಯಾಡ್ ಅಗ್ಲಿ ಸಿನಿಮಾಗೆ ಅಧಿಕ್ ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದಾರೆ. ತ್ರಿಶಾ ಕೃಷ್ಣನ್, ಪ್ರಿಯಾ ಪ್ರಕಾಶ್ ವಾರಿಯರ್, ಅರ್ಜುನ್ ದಾಸ್ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.