Select Your Language

Notifications

webdunia
webdunia
webdunia
webdunia

Vaishnavi Gowda engagement: ವೈಷ್ಣವಿ ಗೌಡ ನಿಶ್ಚಿತಾರ್ಥ ಗುಟ್ಟಾಗಿಡಲು ಅದೊಂದೇ ಕಾರಣನಾ

Vaishnavi Gowda

Krishnaveni K

ಬೆಂಗಳೂರು , ಮಂಗಳವಾರ, 15 ಏಪ್ರಿಲ್ 2025 (11:26 IST)
ಬೆಂಗಳೂರು: ಕನ್ನಡ ಕಿರುತೆರೆ ಖ್ಯಾತ ನಟಿ ವೈಷ್ಣವಿ ಗೌಡ ಇದೀಗ ಉದ್ಯಮಿ ಅಕಾಯ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಕೊನೆಯ ಕ್ಷಣದವರೆಗೂ ವೈಷ್ಣವಿ ತಮ್ಮ ನಿಶ್ಚಿತಾರ್ಥದ ವಿಚಾರ ಗುಟ್ಟಾಗಿಡಲು ಅದೊಂದೇ ಕಾರಣವಿರಬಹುದು ಎನ್ನಲಾಗುತ್ತಿದೆ.

ಈ ಹಿಂದೆ ಎರಡು ವರ್ಷದ ಹಿಂದೆ ವೈಷ್ಣವಿ ಗೌಡ ವಿವಾಹ ಮಾತುಕತೆ ವಿದ್ಯಾಭರಣ್ ಎಂಬವರ ಜೊತೆ ನಡೆದಿತ್ತು. ಆಗಿನ್ನೂ ನಿಶ್ಚಿತಾರ್ಥವೂ ಆಗಿರಲಿಲ್ಲ. ಎರಡೂ ಮನೆಯವರು ಬಂದು ಮಾತುಕತೆ ನಡೆಸಿ ಹೂ ಮುಡಿಸುವ ಶಾಸ್ತ್ರವಾಗಿತ್ತು. ಆದರೆ ಆ ವಿಚಾರ ಲೀಕ್ ಆಗಿ ದೊಡ್ಡ ಸುದ್ದಿಯಾಗಿತ್ತು.

ಕಾರಣಾಂತರಗಳಿಂದ ವಿದ್ಯಾಭರಣ್ ವಿವಾದದಲ್ಲಿ ಸಿಲುಕಿದರು. ಈ ವಿಚಾರದ ಬಳಿಕ ವೈಷ್ಣವಿ ಮನೆಯವರು ಮದುವೆ ಮುರಿದುಕೊಂಡಿದ್ದರು. ಈ ಘಟನೆ ವೈಷ್ಣವಿ ಹಾಗೂ ಕುಟುಂಬದವರಿಗೆ ತೀವ್ರ ನೋವು ತಂದಿತ್ತು. ಸದಾ ಪ್ರಚಾರದಿಂದ ದೂರವೇ ಉಳಿದಿರುವ ವೈಷ್ಣವಿ ಕೂಡಾ ನೊಂದುಕೊಂಡಿದ್ದರು.

ಬಹುಶಃ ಇದೇ ನೋವಿನ ಕಾರಣಕ್ಕೆ ಈ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವನ್ನು ವೈಷ್ಣವಿ ಕುಟುಂಬಸ್ಥರು ತೀರಾ ಖಾಸಗಿಯಾಗಿಟ್ಟುಕೊಂಡಿರಬಹುದು. ಅದೇನೇ ಇರಲಿ, ಧಾರವಾಹಿಗಳ ಮೂಲಕ ಮನೆ ಮಾತಾಗಿರುವ ವೈಷ್ಣವಿ ವಿವಾಹ ಜೀವನ ಖುಷಿಯಾಗಿರಲಿ ಎಂದು ಅಭಿಮಾನಿಗಳು ಮನದುಂಬಿ ಹಾರೈಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Viashnavi Gowda engagement: ಸೀತಾರಾಮ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ: ಹುಡುಗ ಯಾರು video ನೋಡಿ