ಬೆಂಗಳೂರು: ಸೀತಾರಾಮ ಧಾರವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರು ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಇಲ್ಲಿದೆ ಡೀಟೈಲ್ಸ್.
ವೈಷ್ಣವಿ ಗೌಡ ಕನ್ನಡ ಕಿರುತೆರೆಯ ಬೇಡಿಕೆಯ ನಟಿ. ಜೊತೆಗೆ ಸ್ಯಾಂಡಲ್ ವುಡ್ ನಲ್ಲೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸಿನಿಮಾಗಳಲ್ಲಿ ಅವರಿಗೆ ಹೆಚ್ಚು ಯಶಸ್ಸು ಸಿಕ್ಕಿರಲಿಲ್ಲ. ಆದರೆ ಕಿರುತೆರೆಯಲ್ಲಿ ಕ್ವೀನ್ ಆಗಿದ್ದರು.
ಅಗ್ನಿಸಾಕ್ಷಿ, ಸೀತಾರಾಮ ಧಾರವಾಹಿ ಮೂಲಕ ಜನರ ಮನ ಗೆದ್ದಿದ್ದಾರೆ. ಇದೀಗ ತಮ್ಮ ಮನೆಯವರೇ ನೋಡಿ ನಿಶ್ಚಯಿಸಿದ ಹುಡುಗನೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಎಂಗೇಜ್ ಮೆಂಟ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉದ್ಯಮಿ ಅಕಾಯ್ ಎಂಬವರೊಂದಿಗೆ ವೈಷ್ಣವಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಈ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮಾಧ್ಯಮಗಳಿಂದ ಗುಟ್ಟಾಗಿಯೇ ಇಟ್ಟುಕೊಳ್ಳಲಾಗಿತ್ತು. ಕೇವಲ ಆತ್ಮೀಯರು, ಕುಟುಂಬದವರು ಮಾತ್ರ ಪಾಲ್ಗೊಂಡಿದ್ದರು. ವೈಷ್ಣವಿ ಆಪ್ತ ಸ್ನೇಹಿತೆಯೂ ಆಗಿರುವ ನಟಿ ಅಮೂಲ್ಯ ಕುಟುಂಬ ಸಮೇತರಾಗಿ ಭಾಗಿಯಾಗಿದ್ದಾರೆ. ನಿಶ್ಚಿತಾರ್ಥದ ವಿಡಿಯೋ ಇಲ್ಲಿದೆ ನೋಡಿ.