Select Your Language

Notifications

webdunia
webdunia
webdunia
webdunia

ಮನುಷ್ಯನ ರೂಪದಲ್ಲಿ ಪಕ್ಕದಲ್ಲೇ ಇದ್ದ ನಿಜವಾದ ದೇವರು ಅಮ್ಮ: ಕಿಚ್ಚ ಭಾವುಕ

ಮನುಷ್ಯನ ರೂಪದಲ್ಲಿ ಪಕ್ಕದಲ್ಲೇ ಇದ್ದ ನಿಜವಾದ ದೇವರು ಅಮ್ಮ: ಕಿಚ್ಚ ಭಾವುಕ

Sampriya

ಬೆಂಗಳೂರು , ಸೋಮವಾರ, 21 ಅಕ್ಟೋಬರ್ 2024 (14:12 IST)
ಬೆಂಗಳೂರು: ನಿಷ್ಪಕ್ಷಪಾತಿಯಾದ, ಪ್ರೀತಿಸುವ, ಕ್ಷಮಿಸುವ, ಕಾಳಜಿ ತೋರುವ ನನ್ನ ಅಮ್ಮನನ್ನು ಜೀವನದಲ್ಲಿ ನಾನು ಎಂದಿಗೂ ಸಂಭ್ರಮಿಸುತ್ತೇನೆ ಹಾಗೂ ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ. ಅವರು ಮನುಷ್ಯನ ರೂಪದಲ್ಲಿ ನನ್ನ ಪಕ್ಕದಲ್ಲೇ ಇದ್ದ ನಿಜವಾದ ದೇವರು ಎಂದು ತಮ್ಮ ಅಮ್ಮನ ಬಗ್ಗೆ ಕಿಚ್ಚ ಸುದೀಪ್‌ ಬರೆದುಕೊಂಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ (74 ವರ್ಷ) ಭಾನುವಾರ ವಿಧಿವಶರಾಗಿದ್ದು, ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಅಮ್ಮ ನನಗೆ ಸಂಭ್ರಮದಂತೆ ಇದ್ದರು, ಗುರುವಾಗಿದ್ದರು, ನನ್ನ ನಿಜವಾದ ಹಿತೈಷಿಯಾಗಿದ್ದರು. ಅದಕ್ಕಿಂತ ಮಿಗಿಲಾಗಿ ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಸಿನಿಮಾಗಳನ್ನೂ ಪ್ರೀತಿಸಿದವರು ಅವರು. ಅವರನ್ನು ಹೃದಯದಲ್ಲಿ ಇರಿಸಿಕೊಳ್ಳುತ್ತೇನೆ ಎಂದೆನಲ್ಲ, ಅದು ಏಕೆಂದರೆ ಅವರು ಈಗೊಂದು ಸುಂದರವಾದ ನೆನಪು ಎಂದಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ 5.30ಕ್ಕೆ ಗುಡ್‌ ಮಾರ್ನಿಂಗ್‌ ಕಂದಾ... ಎನ್ನುವ ಅವರ ಸಂದೇಶವೇ ನನ್ನ ಮೊಬೈಲ್‌ಗೆ ಬರುವ ಮೊದಲ ಸಂದೇಶವಾಗಿತ್ತು. ಅಕ್ಟೋಬರ್‌ 18ಕ್ಕೆ ಅವರ ಕೊನೆಯ ಸಂದೇಶ ನನಗೆ ಬಂದಿತ್ತು. ಬಿಗ್‌ಬಾಸ್‌ ಶೂಟಿಂಗ್‌ನಲ್ಲಿದ್ದ ಕಾರಣ ನಾನು ಈ ಸಂದೇಶವನ್ನು ಗಮನಿಸಿರಲಿಲ್ಲ. ನನಗೀಗ ಆಗುತ್ತಿರುವ ನೋವನ್ನು ಪದದಲ್ಲಿ ಕಟ್ಟಿಕೊಡಲು ಅಸಾಧ್ಯ. ಅವರು ಇಲ್ಲದಿರುವ ವಾತಾವರಣವನ್ನು ನನಗೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ಎಲ್ಲವೂ ಬದಲಾಯಿತು ಎಂದು ಭಾವುಕರಾಗಿದ್ದಾರೆ.

ಅವರನ್ನು ಮತ್ತೆ ಹೇಗೆ ಪಡೆದುಕೊಳ್ಳುವುದು ಎಂದು ನನಗೆ ತಿಳಿದಿಲ್ಲ. ವಾಸ್ತವವನ್ನು ಹೇಗೆ ಸ್ವೀಕಾರ ಮಾಡುವುದೂ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಕೈವಾಡ: ಶೋಭಾ ಕರಂದ್ಲಾಜೆ ಮಹತ್ವದ ಪ್ರತಿಕ್ರಿಯೆ