ಬೆಂಗಳೂರು: ಕನ್ನಡದ ಬಿಗ್‌ಬಾಸ್ ಫಿನಾಲೆ ವಾರ ನಡೆಯುತ್ತಿದೆ. ದೊಡ್ಮನೆಯಲ್ಲಿ ಉಳಿದಿರುವ ಕೊನೆಯ ಆರು ಸ್ಪರ್ಧಿಗಳು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಉಗ್ರಂ ಮಂಜು, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ, ಹನುಮಂತ, ರಜತ್ ಈ ಸ್ಪರ್ಧಿಗಳು ಟಾಪ್ 6 ಫೈನಲಿಸ್ಟ್ ಆಗಿದ್ದಾರೆ. ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.
ಇದೀಗ ಮಹರ್ಷಿ ದರ್ಶನ ಖ್ಯಾತಿಯ ವಿದ್ಯಾಶಂಕರಾನಂದ ಸರಸ್ವತಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಸ್ಪರ್ಧಿಗಳ ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಗಳ ಪೈಕಿ ಉಗ್ರಂ ಮಂಜು ಈ ಆವೃತ್ತಿಯಲ್ಲಿ ಉಗ್ರವಾಗಿ ಆಡಿ ಗಮನ ಸೆಳೆದಿದ್ದರು. ಸಹಸ್ಪರ್ಧಿಗಳಿಗೆ ಅವರು ಠಕ್ಕರ್ ಕೊಡುತ್ತಿದ್ದಾರೆ. ಮಂಜು ಮದುವೆ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದಾರೆ.
ತಂಗಿಯರ ಮದುವೆ ಆದಮೇಲೆ ಆಗೋಣ ಎಂದುಕೊಂಡಿದ್ದೆ. ಈಗ 38 ವರ್ಷ ವಯಸ್ಸು ಎಂದು ಮಂಜು ಹೇಳಿದರು. ಇದಕ್ಕೆ ಉತ್ತರಿಸಿದ ವಿದ್ಯಾಶಂಕರಾನಂದ ಸರಸ್ವತಿ, ನೀನು ಎಮೋಷನಲ್ ಫೂಲ್. ಹೊರಗಡೆ ನೋಡೋದಕ್ಕೆ ಹಲಸಿನ ಹಣ್ಣಿನ ರೀತಿ ಒರಟು ಆಗಿದ್ದೀಯಾ. ಆದರೆ, ನಿನ್ನ ಮನಸ್ಸು ತೊಳೆಗಳ ರೀತಿ ಮೃದು. ಯಾವಾಗಲೂ ಅಸ್ಥಿರತೆ ಕಾಡುತ್ತಿದೆ. ಮೋಸ ಹೋದರೆ ಅಥವಾ ಬೇರೆಯವರಿಗೆ ಅನ್ಯಾಯ ಆದರೆ ಎನ್ನುವ ಭಾವನೆಯಲ್ಲೇ ಬದುಕುತ್ತೀಯ ಎಂದು ಗುರೂಜಿ ಮಾತನಾಡಿದ್ದಾರೆ.
ಬದುಕು ಯಾವಾಗಲೂ ಅಸ್ಥಿರವೇ, ಅದರಲ್ಲಿ ಸ್ಥಿರತೇ ಕಂಡುಕೊಳ್ಳಬೇಕು. ಮುಂದಿನ ನಾಲ್ಕು ವರ್ಷ ಅಂದರೆ 2029ರವರೆಗೆ ತಿರುಗಿ ನೋಡುವ ಮಾತೇ ಇಲ್ಲ. 2026ರವರೆಗೆ ಕಂಕಣ ಬಲ ಇದೆ. ಹೊರಗೆ ಹೋಗ್ತಾ ಇದ್ದ ಹಾಗೆ ಮದುವೆ ಆಗುತ್ತದೆ. ಒಳ್ಳೆಯ ಸಂಗಾತಿ ಬರುತ್ತಾಳೆ ಎಂದು ಅಭಯ ನೀಡಿದ್ದಾರೆ.
ಮಂಜು ಎಂದರೆ ಒಳ್ಳೆಯ ಹೆಸರು ಬರುತ್ತದೆ. ತಲೆಗೆ ಏರಿಸಿಕೊಳ್ಳಬೇಡ ಎಂದು ಕಿವಿ ಮಾತು ಹೇಳಿದರು. ಇದಕ್ಕೆ ಮಂಜು ಖುಷಿಯಿಂದ ತಲೆ ಆಡಿಸಿದರು. ತಾಯಿಯ ಆರೋಗ್ಯದ ಬಗ್ಗೆ ಗಮನ ಇರಲಿ. ತಾಯಿಯನ್ನು ಕಳೆದುಕೊಳ್ಳೋಕೆ ಹೋಗಲೇಬಾರದು ಎಂದು ಗುರೂಜಿ ಹೇಳುತ್ತಿದ್ದಂತೆ ನೀವು ಹೇಳಿದ್ದು ಸರಿ ಇದೆ ಎಂದರು ಮಂಜು.