ಬೆಂಗಳೂರು: ಭಾರೀ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕಿರುತೆರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಆರಂಭಗೊಂಡಿದೆ.
ಅದ್ದೂರಿಯಾಗಿ ವೇದಿಕೆಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ಬಿಗ್ ಬಾಸ್ ಮನೆಯ ರಚನೆಯನ್ನು ನೋಡಿ ಶಾಕ್ ಆಗಿದ್ದಾರೆ.
ದೊಡ್ಮನೆಯೊಳಗೆ ಎಂಟ್ರಿ ಕೊಟ್ಟ ಸುದೀಪ್ ಅವರು ದೇವರ ದೀಪ ಹಚ್ಚಿ ಶುಭರಾಂಭ ಮಾಡಿದ್ದಾರೆ. ಇನ್ನೂ ಮನೆಯ ರಚನೆ ನೋಡಿ ಕಿಚ್ಚ ಸ್ವಲ್ಪ ಗೊಂದಲಕ್ಕೀಡಾದರು.
11 ಸೀಸನ್‌ನಲ್ಲೂ ಒಂದೇ ಬೆಡ್ ರೂಂ, ಒಂದೇ ಡೈನಿಂಗ್ ರೂಂ ಇದ್ದ ಬಿಗ್ ಬಾಸ್ ನಲ್ಲಿ ಈ ಬಾರಿ ಎರಡೆರಡು ಕಾಣಿಸುತ್ತದೆ.
ಇದನ್ನು ನೋಡಿದ ಕಿಚ್ಚ ಬಾರಿ ಕುತೂಹಲವನ್ನು ಮೂಡಿಸುತ್ತದೆ ಎಂದಿದ್ದಾರೆ.