Select Your Language

Notifications

webdunia
webdunia
webdunia
webdunia

ಬಿಗ್‌ಬಾಸ್‌ ಮನೆ ಹೊಸ ಹುರುಪಿನೊಂದಿಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು, ಬಿಗ್‌ಬಾಸ್ ಜ್ಯೋತಿ ಆರಲು ಅಸಾಧ್ಯ

Colors Kannada

Sampriya

ಬೆಂಗಳೂರು , ಗುರುವಾರ, 9 ಅಕ್ಟೋಬರ್ 2025 (17:35 IST)
Photo Credit X
ಬೆಂಗಳೂರು: ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಪೊಲೀಸ್ ಭದ್ರತೆಯಲ್ಲಿ ಹಾಕಿದ್ದ ಬೀಗವನ್ನು ಇದೀಗ ತೆರೆಯಲಾಗಿದೆ. ಈ ಸಂಬಂದ ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋವೊಂದನ್ನು ಹಂಚಿಕೊಂಡಿದೆ.

ಈ ಮೂಲಕ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಆವೃತ್ತಿ ಎಂದಿನಂತೆ ಮತ್ತೆ ಶುರುವಾಗಿದೆ. ಎರಡು ದಿನ ಸಂಪೂರ್ಣವಾಗಿ ಖಾಲಿಯಾಗಿದ್ದ ಮನೆ ಈಗ ಸ್ಪರ್ಧಿಗಳಿಂದ ಭರ್ತಿಯಾಗಿದೆ. ರಿಲೀಸ್ ಮಾಡಿದ  ಪ್ರೋಮೋದಲ್ಲಿ ಹೊಸ ಹುರುಪಿನೊಂದಿಗೆ ಸ್ಪರ್ಧಿಗಳನ್ನು ಮನೆ ಒಳಗೆ ಸ್ವಾಗತಿಸಲಾಗಿದೆ. 

ಪ್ರೋಮೋದಲ್ಲಿ  ಹೀಗಿದೆ: 

‘ಇದು ಬಿಗ್‌ಬಾಸ್‌ ಮನೆ ಮಾತ್ರವಲ್ಲ, ನಮ್ಮ ಕನ್ನಡಿಗರ ಹೆಮ್ಮೆ. ಕನ್ನಡಿಗರೆಲ್ಲಾ ಹಚ್ಚಿ ಸಂಭ್ರಮಿಸೋ ಈ ಜ್ಯೋತಿ ಆರಲು ಅಸಾಧ್ಯ. ನಿಮ್ಮ ಆಟಕ್ಕೆ ನೀಡಿದ್ದ ಅಲ್ಪ ವಿರಾಮ ಮುಗಿದಿದೆ. ಹೊಸ ಹುರುಪು ಹಾಗೂ ಇನ್ನಷ್ಟು ಛಲದೊಂದಿಗೆ ಆಟವನ್ನು ಮುಂದುವರೆಸಿ’ ಎಂದಿದ್ದಾರೆ.

ಬಿಗ್‌ಬಾಸ್‌ ಧ್ವನಿ ಕೇಳುತ್ತಿದ್ದಂತೆ ಮನೆಮಂದಿ ಮುಖದಲ್ಲಿ ನಗು ಮೂಡಿದೆ. ಹೊಸ ಹುರುಪಿನೊಂದಿಗೆ ಬಿಗ್‌ಬಾಸ್‌ ಮನೆ ಒಳಗಡೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.

<div class="paragraphs"><p>ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್</p></div>

ಅಸಲಿಗೆ ಏನಾಗಿತ್ತು?

ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಂಡಳಿಯು ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ, ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಬೀಗ ಹಾಕಲಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ತೆರೆದ ದೊಡ್ಮನೆ, ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಕೆ ಶಿವಕುಮಾರ್ ಧನ್ಯವಾದ: ಕಿಚ್ಚ ಸುದೀಪ್ ಪೋಸ್ಟ್