Select Your Language

Notifications

webdunia
webdunia
webdunia
webdunia

ರಾತ್ರೋರಾತ್ರಿ ದೊಡ್ಮನೆಯಿಂದ ಹೊರಬಂದ ಸ್ಪರ್ಧಿಗಳು, ರಕ್ಷಿತಾ ಹೇಳಿದ ಆ ಮಾತಿಗೆ ತಥಾಸ್ತು ಎಂದ್ರಾ ದೇವರು

BigBoss Season 12

Sampriya

ಬೆಂಗಳೂರು , ಬುಧವಾರ, 8 ಅಕ್ಟೋಬರ್ 2025 (14:53 IST)
Photo Credit X
ಕಿರುತೆರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಶುರುವಾದ 2ನೇ ವಾರದಲ್ಲೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ರಾತ್ರೋರಾತ್ರಿ ದೊಡ್ಮನೆಯಲ್ಲಿದ್ದ ಬಿಗ್‌ಬಾಸ್ ಸ್ಪರ್ಧಿಗಳನ್ನು ಮನೆಯಿಂದ ಹೊರಕರೆತಂದು ಇದೀಗ ಈಸ್ಟನ್ ಗಾರ್ಡ್‌ನಲ್ಲಿ ಇರಿಸಲಾಗಿದೆ. 

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಜಾಲಿವುಡ್ ಸ್ಟುಡಿಯೋಸ್​​ಗೆ ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಬೀಗ ಹಾಕಿದ್ದಾರೆ. 

ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೊದಲ ದಿನವೇ ಮನೆಯಿಂದ ಎಲಿಮಿನೇಟ್ ಆಗಿ, ಅದೇ ವಾರದಲ್ಲಿ ಮತ್ತೇ ದೊಡ್ಮನೆಗೆ ಎಂಟ್ರಿ ಕೊಟ್ಟ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಮಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸುದೀಪ್ ವರು ವೇದಿಕೆಯಲ್ಲಿ ರಕ್ಷಿತಾ ಬಳಿ ಯಾರನ್ನೂ ಮನೆಯಿಂದ ಹೊರಹಾಕಲು ಇಷ್ಟಪಡುತ್ತೀರಾ ಎಂದು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ರಕ್ಷಿತಾ ಎಲ್ಲರನ್ನೂ ಮನೆಯಿಂದ ಆಚೆ ಹಾಕುತ್ತೇನೆ ಎನ್ನುತ್ತಾರೆ.ಇದೀಗ  ಸ್ಪರ್ಧಿ ರಕ್ಷಿತಾ ಶೆಟ್ಟಿ ಆಡಿದ ಮಾತು ಸಖತ್ ಟ್ರೆಂಡ್ ಆಗುತ್ತಿದೆ.

ಬಿಗ್​ ಬಾಸ್​ ಸೀಸನ್​- 12 ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕಿದ ಪರಿಣಾಮ, ಸ್ಪರ್ಧಿಗಳಾದ ಕಾವ್ಯ ಶೈವ, ಗಿಲ್ಲಿ ನಟ, ಡಾಗ್​ ಸತೀಶ್,​ ಚಂದ್ರಪ್ರಭ, ಅಭಿಷೇಕ್​​, ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ, ಮಂಜು ಭಾಷಿಣಿ, ರಾಶಿಕಾ, ಕಾಕ್ರೋಚ್​ ಸುಧಿ, ಮಲ್ಲಮ್ಮ, ನಿರೂಪಕಿ ಜಾಹ್ನವಿ, ಧನುಷ್​ ಗೌಡ, ಮುದ್ದು ಲಕ್ಷ್ಮೀ ಖ್ಯಾತಿಯ ನಟ ಧ್ರುವಂತ್​, ನಟಿ ಅಶ್ವಿನಿ ಗೌಡ ಸೇರಿ ಎಲ್ಲರೂ ಒಬ್ಬೊಬ್ಬರಾಗಿ ಮನೆಯಿಂದ ಹೊರ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ 12 ವೀಕ್ಷಕರಿಗೆ ಗುಡ್ ನ್ಯೂಸ್