Daily Horoscope

Select Your Language

Notifications

webdunia
webdunia
webdunia
webdunia

ಬಿಗ್‌ಬಾಸ್‌ಗೆ ಎಡೆ ಮಾಡಿಕೊಡುತ್ತಿದೆ ಕಲರ್ಸ್‌ ಕನ್ನಡದ ಟಾಪ್ ರೇಟಿಂಗ್ ಸೀರಿಯಲ್‌ಗಳು

ಕಲರ್ಸ್ ಕನ್ನಡ ಧಾರಾವಾಹಿಗಳು
Photo Credit X
ಕನ್ನಡ ಕಿರುತೆರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆ.28ರಂದು ಸಂಜೆ 6ಕ್ಕೆ ಬಿಗ್‌ಬಾಸ್ ಆರಂಭಗೊಳ್ಳಲಿದ್ದು, ಇದಾದ ನಂತರ ಪ್ರತಿ ರಾತ್ರಿ 9:30ರಿಂದ 11ರವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್‌ಬಾಸ್‌ಗೆ ಸಮಯ ಮೀಸಲಿಡುವ ನಿಟ್ಟಿನಲ್ಲಿ ಕಲರ್ಸ್ ಕನ್ನಡದ ಮೂರು ಸೀರಿಯಲ್‌ಗಳು ಅಂತ್ಯವಾಗಲಿದೆ. 

ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿರುವ ‘ದೃಷ್ಟಿಬೊಟ್ಟು’ ಧಾರಾವಾಹಿ ಅಂತ್ಯ ಹಾಡಿದೆ. ಈ ಬಗ್ಗೆ ನಿರ್ಮಾಪಕರಾದ ನಟ ರಕ್ಷ್​ ಹಾಗೂ ಪತ್ನಿ ಅನುಷಾ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ‌

ಇನ್ನೂ ಕಲರ್ಸ್ ಕನ್ನಡದ ಸಾವಿರ ಸಂಚಿಕೆಉನ್ನು ದಾಟಿರುವ ರಾಮಾಚಾರಿ ಸೀರಿಯಲ್ ಕೂಡಾ ಅಂತ್ಯವಾಗಲಿದೆ.  ಸದ್ಯಕ್ಕೆ 60 ಸಂಚಿಕೆಗಳು ಬಾಕಿ ಉಳಿದ್ದಿದ್ದು, ಅದು ಪ್ರಸಾರ ಕಾಣುತ್ತಿದೆ. ಬಿಗ್‌ಬಾಸ್‌ ಶುರುವಾದ ಕೆಲವು ದಿನಗಳವರೆಗೂ ರಾಮಾಚಾರಿ ಧಾರಾವಾಹಿ ಪ್ರಸಾರವಾಗಲಿದೆ. ಇದಾದ ನಂತರ ಅಂತ್ಯ ಹಾಡಲಿದೆ.

ಇನ್ನೂ ಅಚ್ಚರಿ ಸಂಗತಿ ಏನೆಂದರೆ ಕಲರ್ಸ್ ಕನ್ನಡದಲ್ಲಿ 8ಗಂಟೆಗೆ ಪ್ರಸಾರವಾಗುತ್ತಿರುವ ನಟಿ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಅಭಿನಯದ ನಿನಗಾಗಿ ಸೀರಿಯಲ್ ಕೂಡಾ ಅಂತ್ಯ ಹಾಡಲಿದೆ ಎಂದು ತಿಳಿದುಬಂದಿದೆ. 

ಟಾಪ್ ರೇಟಿಂಗ್‌ನಲ್ಲಿರುವಾಗಲೇ ನಿನಗಾಗಿ ಸೀರಿಯಲ್ ಅಂತ್ಯವಾಗುತ್ತಿರುವುದು, ಅಭಿಮಾನಿಗಳಿಗೆ ಶಾಕ್‌ ನೀಡಿದೆ. 

ಒಟ್ಟಿನಲ್ಲಿ ಬಿಗ್‌ಬಾಸ್‌ ಪ್ರಸಾರಕ್ಕೆ ಈ ಮೂರು ಧಾರಾವಾಹಿಗಳು ದಾರಿ ಮಾಡಿ ಕೊಡುತ್ತಿವೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬರಲಿದ್ದು, ರಾಮಾಚಾರಿ, ದೃಷ್ಟಿಬೊಟ್ಟು ಹಾಗೂ ನಿನಗಾಗಿ ಮುಕ್ತಾಯ ಆಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಜೀವನಚರಿತ್ರೆ ಸಿನಿಮಾ: ಮೋದಿ ಪಾತ್ರಕ್ಕೆ ಜೀವತುಂಬಲಿದ್ದಾರೆ ಮಲಯಾಳಂ ನಟ