ಬೆಂಗಳೂರು: ಸೂರ್ಯನೊಬ್ಬ, ಚಂದ್ರನೊಬ್ಬ, ಅದು ಅದರದ್ದೆ ಜಾಗದಲ್ಲಿದ್ರೆ ಚೆಂದ ಎನ್ನುವ ಮೂಲಕ ಇಬ್ಬರು ದೂರವಾಗಿದ್ರೆನೆ ಚಂದ ಎಂದು ನಟ ಸುದೀಪ್ ಹೇಳಿದ್ದಾರೆ.
ನಾಳೆ ನಟ ಸುದೀಪ್ ಅವರು 51ನೇ ಹುಟ್ಟುಹಬ್ಬವನ್ನು ಆಚರಿಸಕೊಳ್ಳಲಿದ್ದು, ಈ ಹಿನ್ನೆಲೆ ಇಂದು ಸುದ್ದಿಗೋಷ್ಠಿಯಲ್ಲಿ ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ. ವೈಯ್ಯಕ್ತಿಕ ವಿಚಾರದಲ್ಲಿ ನನಗೆ ಇಷ್ಟವಿಲ್ಲ. ನಾನು ಕೆಲವೊಂದಜ್ಜೆ ಪ್ರತಿಕ್ತಿಯಿಸಲು ಹೋದರೆ ಅದು ಇನ್ನಷ್ಟು ಹಾಳು ಮಾಡುತ್ತದೆ ಎಂದರು.
ಮತ್ತೊಬ್ಬರ ಖುಷಿಗಾಗಿ ನಾವಿಬ್ಬರು ಮತ್ತೇ ಒಂದಾಗಬೇಕೆನ್ನುವುದು ಸರಿಯಲ್ಲ. ನಾವಿಬ್ಬರು ಟೀನೆಜ್ ಹುಡುಗರಲ್ಲ. ನಮ್ಮದೇ ಆದ ಸ್ವಂತಿಗೆ ಬುದ್ಧಿ ಇರುತ್ತದೆ. ನಮ್ಮ ನಡುವಿನ ಸತ್ಯಗಳು ನಮಗಷ್ಟೇ ಗೊತ್ತಿದೆ.
ಇನ್ನೂ ಈ ಸಂದರ್ಭದಲ್ಲಿ ನಟ ಸುದೀಪ್ ಅವರು ದರ್ಶನ್ ಮುಂದಿನ ಸಿನಿಮಾ ಡೆವಿಲ್‌ಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.