ಬೆಂಗಳೂರು: ಆಂಕರ್ ಅನುಶ್ರೀ ಮದುವೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಯಾಕೆ ಗೈರಾಗಿದ್ದರು ಎಂಬುದಕ್ಕೆ ನಿಜ ಕಾರಣ ಈಗ ಬಯಲಾಗಿದೆ. ಶ್ರೀದೇವಿ ಬೈರಪ್ಪ ಕಾರಣ ಅಲ್ಲ ಎಂಬುದು ಈಗ ಖಚಿತವಾಗಿದೆ.
ಆಗಸ್ಟ್ 28 ರಂದು ಆಂಕರ್ ಅನುಶ್ರೀ ಮತ್ತು ರೋಷನ್ ಕಲ್ಯಾಣ ನೆರವೇರಿತ್ತು. ಅನುಶ್ರೀಗೆ ಪುನೀತ್ ರಾಜ್ ಕುಮಾರ್ ಎಂದರೆ ಅಚ್ಚುಮೆಚ್ಚು. ಅವರ ಎಂಥಾ ಅಪ್ಪಟ ಅಭಿಮಾನಿಯೆಂದರೆ ಮದುವೆ ಮನೆಯಲ್ಲೂ ಅಪ್ಪು ಫೋಟೋವೊಂದನ್ನು ಹಾಕಿದ್ದರು.
ದೊಡ್ಮನೆಯಿಂದ ಅನುಶ್ರೀ ಮದುವೆಗೆ ಶಿವಣ್ಣ ದಂಪತಿ ಬಿಟ್ಟರೆ ಅಶ್ವಿನಿ ಬಂದಿರಲೇ ಇಲ್ಲ. ಇದಕ್ಕೆ ಯುವ ರಾಜ್ ಕುಮಾರ್ ಮಾಜಿ ಪತ್ನಿ ಶ್ರೀದೇವಿ ಕಾರಣವಿರಬಹುದು ಎನ್ನಲಾಗಿತ್ತು. ಶ್ರೀದೇವಿಯಿಂದಲೇ ಅನುಶ್ರೀಗೆ ರೋಷನ್ ಪರಿಚಯವಾಗಿದ್ದು. ರೋಷನ್ ಹಾಗೂ ಶ್ರೀದೇವಿ ಸ್ನೇಹಿತರು. ಹೀಗಾಗಿ ಮದುವೆಗೆ ಶ್ರೀದೇವಿಗೆ ವಿದೇಶದಿಂದ ಬಂದಿದ್ದರು. ಶ್ರೀದೇವಿ ಜೊತೆ ಮುಖಾಮುಖಿ ತಪ್ಪಿಸಲೇ ಅಶ್ವಿನಿ ಮದುವೆಗೆ ಬರಲಿಲ್ವಾ ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ಅಸಲಿ ಕತೆಯೇ ಬೇರೆ. ಅಶ್ವಿನಿ ಇದೀಗ ಮಗಳು ಧೃತಿ ಜೊತೆ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಮಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವಳ ಜೊತೆಗಿರುವ ಕಾರಣಕ್ಕೇ ಅಶ್ವಿನಿ ಮದುವೆಗೆ ಬಂದಿರಲಿಲ್ಲ ಎನ್ನಲಾಗಿದೆ.