ಬೆಂಗಳೂರು: ಕನ್ನಡದ ಖ್ಯಾತ ಆಂಕರ್ ಅನುಶ್ರೀ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಿನ್ನೆ ಅವರ ಅರಿಶಿನ ಶಾಸ್ತ್ರಗಳು ನೆರವೇರಿದ್ದು ಫೋಟೋಗಳು ವೈರಲ್ ಆಗಿದೆ.
ಮಂಗಳೂರು ಮೂಲದ ಆಂಕರ್ ಅನುಶ್ರೀ ಗೆಳೆಯ, ಉದ್ಯಮಿ ರೋಷನ್ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆದರೆ ಕೊನೆಯ ಕ್ಷಣದವರೆಗೂ ತಮ್ಮ ಮದುವೆ ವಿಚಾರವನ್ನು ಅನುಶ್ರೀ ಮಾಧ್ಯಮಗಳಿಂದ ದೂರವೇ ಇಟ್ಟಿದ್ದಾರೆ.
ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ಮದುವೆ ಕಾರ್ಯಕ್ರಮಗಳು ಖಾಸಗಿಯಾಗಿ ನೆರವೇರುತ್ತಿದೆ. ಮದುವೆಗೆ ಸ್ಯಾಂಡಲ್ ವುಡ್ ಸ್ನೇಹಿತರು, ಆಪ್ತರು ಮತ್ತು ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿದೆ. ಆಂಕರಿಂಗ್ ಮೂಲಕ ಸಾಕಷ್ಟು ಜನರ ಸ್ನೇಹ ಸಂಪಾದಿಸಿರುವ ಅನುಶ್ರೀ ಮದುವೆಗೆ ಸ್ಯಾಂಡಲ್ ವುಡ್ ನ ಘಟಾನುಘಟಿಗಳು ಆಗಮಿಸುವ ನಿರೀಕ್ಷೆಯಿದೆ.
ಇಷ್ಟು ದಿನ ಅನುಶ್ರೀ ಎಲ್ಲೇ ಹೋದರೂ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿಬರುತ್ತಲೇ ಇತ್ತು. ಆದರೆ ಈಗ ಕೊನೆಗೂ ಸದ್ದಿಲ್ಲದೇ ಹಸೆಮಣೆ ಏರುತ್ತಿದ್ದಾರೆ.