Select Your Language

Notifications

webdunia
webdunia
webdunia
webdunia

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ನಟ ದರ್ಶನ್ ತೂಗುದೀಪ್

Sampriya

ಬೆಂಗಳೂರು , ಮಂಗಳವಾರ, 26 ಆಗಸ್ಟ್ 2025 (14:22 IST)
Photo Credit X
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗದೆ ಇದ್ದಿದ್ದರೆ ಡೆವಿಲ್ ಸಿನಿಮಾ ಬಿಡುಗಡೆಯಾಗಿ, ಫ್ಯಾಮಿಲಿ ಜತೆ ಆರಾಮಾಗಿ ಸಮಯ ಕಳೆಯುತ್ತಿದ್ದರು. ಇಂದು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಆಚರಿಸುತ್ತಿದ್ರು, ಆದರೆ ಇದೀಗ ಜೈಲಲ್ಲಿ ಆಚರಿಸುವ ಪರಿಸ್ಥಿತಿ. 

ಅವರ ಪತ್ನಿ ವಿಜಯಲಕ್ಷ್ಮಿ ಗೌರಿ ಗಣೇಶ ಹಬ್ಬದ ಹಿನ್ನೆಲೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.  ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಜತೆಗಿನ ಪೋಟೋವನ್ನು ಹಂಚಿ, ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. 

ಕಳೆದ ವರ್ಷವೂ ದರ್ಶನ್ ಪಾಲಿನ ಗೌರಿ ಗಣೇಶ ಹಬ್ಬ ಜೈಲಲ್ಲೇ ನಡೀತು, ಈ ವರ್ಷವೂ ಜೈಲೇ ಕಂಟಿನ್ಯೂ ಆಗಿದೆ. ಇಂಥಹ ವಿಪರ್ಯಾಸದಲ್ಲೂ ವಿಜಯಲಕ್ಷ್ಮಿ ಪತಿ ಜೊತೆ ಫೋಟೋ ಪೋಸ್ಟ್ ಮಾಡಿ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ.

ಮೈಸೂರಿನ ಪಾರ್ಮ್‌ಹೌಸ್‌ನಲ್ಲಿ ನಡೆದ ಹಬ್ಬದ ಸಂಭ್ರಮದಲ್ಲಿ ತೆಗೆದ ಫೋಟೋವನ್ನು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. 

ನೋವಿನಲ್ಲಿರುವ ದರ್ಶನ್‌ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಪೋಸ್ಟ್ ಖುಷಿ ನೀಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್