Select Your Language

Notifications

webdunia
webdunia
webdunia
webdunia

ಮಣ್ಣಿನ ಗಣೇಶನನ್ನೇ ಬಳಸಿ ಎಂದು ಕರೆಕೊಟ್ಟ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಮಂಗಳವಾರ, 26 ಆಗಸ್ಟ್ 2025 (10:02 IST)

ಬೆಂಗಳೂರು: ನಾಳೆ ಗಣೇಶ ಹಬ್ಬವಿದ್ದು ಎಲ್ಲೆಡೆ ಗಣೇಶನ ಮೂರ್ತಿಯನ್ನು ಮನೆಗೆ ತರುವ ಸಂಭ್ರಮ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜನತೆಗೆ ಪರಿಸರ ಸ್ನೇಹೀ ಗಣೇಶನನ್ನೇ ಬಳಸಿ ಎಂದು ಕರೆಕೊಟ್ಟಿದ್ದಾರೆ.

‘ನಾಡಬಂಧುಗಳಿಗೆ ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಜಲಚರಗಳಿಗೆ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಯುಕ್ತ ಗಣೇಶ ಮೂರ್ತಿಯ ಬದಲಿಗೆ ಮಣ್ಣಿನಿಂದಷ್ಟೇ ಮಾಡಿದ ಪರಿಸರಸ್ನೇಹಿ ಗಣೇಶನನ್ನು ಪೂಜಿಸೋಣ. ಹಬ್ಬವನ್ನು ಸಂಭ್ರಮ - ಸಡಗರದೊಂದಿಗೆ ಆಚರಿಸುವ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ.

ವಿಘ್ನನಿವಾರಕನಾದ ಗಣೇಶನು ನಿಮ್ಮೆಲ್ಲಾ ಕಷ್ಟಗಳನ್ನು ಕಳೆದು ಸುಖ - ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಈ ಬಾರಿಯೂ ಗಣೇಶ ಹಬ್ಬಕ್ಕೆ ಪಿಒಪಿ ಗಣೇಶನನ್ನು ಬಳಸದಂತೆ ಸರ್ಕಾರ ಕಠಿಣ ನಿಯಮ ರೂಪಿಸಿದೆ. ಪರಿಸರ ಸ್ನೇಹೀ ಮಣ್ಣಿನ ಗಣೇಶನನ್ನೇ ಬಳಸುವಂತೆ ಕರೆನೀಡಲಾಗಿದೆ. ಒಂದು ವೇಳೆ ಪಿಒಪಿ ಗಣೇಶನನ್ನು ಕೂರಿಸಿದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಜಾತ ಭಟ್ ವಿಚಾರಣೆಗೆ ಬಂದ ಟೈಂ ನೋಡಿ ಎಸ್ಐಟಿ ಅಧಿಕಾರಿಗಳೇ ಶಾಕ್