ಬೆಳ್ತಂಗಡಿ: ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತ ಭಟ್ ವಿಚಾರಣೆಗೆ ಎಸ್ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದರು. ಆದರೆ ಸುಜಾತ ಭಟ್ ಬಂದ ಸಮಯ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ.
ಧರ್ಮಸ್ಥಳಕ್ಕೆ ಸ್ನೇಹಿತರೊಂದಿಗೆ ಬಂದಿದ್ದ ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಅತ್ತು ಕರೆದು ಮಾಡಿದ್ದ ಸುಜಾತ ಭಟ್ ಬಳಿಕ ತಾನು ಹೇಳಿದ್ದು ಸುಳ್ಳು ಎಂದು ಹೇಳಿದ್ದರು. ಇನ್ನೊಮ್ಮೆ ನನಗೆ ಬೆದರಿಸಿ ಹೀಗೆ ಹೇಳಿಸಿದರು ಎಂದಿದ್ದರು.
ಇವೆಲ್ಲಾ ಗೊಂದಲಗಳ ನಡುವೆ ಆಕೆಗೆ ಮಗಳೇ ಇಲ್ಲ ಎಂದು ಆಕೆಯ ಸಂಬಂಧಿಕರು ಹೇಳುತ್ತಿದ್ದರೆ. ಇದೀಗ ಅನನ್ಯಾ ಭಟ್ ಪ್ರಕರಣದ ಸೃಷ್ಟಿಕರ್ತೆ ಸುಜಾತ ಭಟ್ ರನ್ನು ವಿಚಾರಣೆಗೆ ಎಸ್ಐಟಿ ಅಧಿಕಾರಿಗಳು ಶುಕ್ರವಾರ ಬರುವಂತೆ ಹೇಳಿದ್ದರು.
ಆದರೆ ಅಧಿಕಾರಿಗಳು ನಿಗದಿಪಡಿಸಿದ ದಿನಕ್ಕಿಂತ ಮೊದಲೇ ಸುಜಾತ ಭಟ್ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಬಂದಿದ್ದಾರೆ. ಅದೂ ಬೆಳ್ಳಂ ಬೆಳಿಗ್ಗೆ 5 ಗಂಟೆ ಹೊತ್ತಿಗೆ! ಈ ವೇಳೆ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದರು. ಈ ಸಮಯದಲ್ಲಿ ಸುಜಾತ ಭಟ್ ಬಂದಿದ್ದು ನೋಡಿ ಅವರೂ ಶಾಕ್ ಆಗಿದ್ದಾರೆ. ಬಳಿಕ ಆಕೆಯನ್ನು ಒಳಗೆ ಕರೆದೊಯ್ದಿದ್ದು ವಿಚಾರಣೆ ಶುರು ಮಾಡಲಿದ್ದಾರೆ.