Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ವಿವಾದಕ್ಕೆ ಬಿಜೆಪಿ, ಆರ್ ಎಸ್ಎಸ್ ಕಾರಣ ಎಂದ ಬಿಕೆ ಹರಿಪ್ರಸಾದ್

BK Hariprasad

Krishnaveni K

ನವದೆಹಲಿ , ಸೋಮವಾರ, 25 ಆಗಸ್ಟ್ 2025 (13:47 IST)
ನವದೆಹಲಿ: ಧರ್ಮಸ್ಥಳ ವಿವಾದಕ್ಕೆ ಬಿಜೆಪಿಯ ಒಳಜಗಳ ಮತ್ತು ಆರ್ ಎಸ್ಎಸ್ ಕಾರಣ ಎಂದು ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಧರ್ಮಸ್ಥಳ ವಿವಾದದ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆಲ್ಲಾ ಬಿಜೆಪಿಯ ಒಳಜಗಳವೇ ಕಾರಣ ಎಂದು ಹೇಳಿದ್ದಾರೆ. ಧರ್ಮಸ್ಥಳ ವಿವಾದಕ್ಕೂ ಬಿಜೆಪಿ ಒಳಜಗಳಕ್ಕೂ ಸಂಬಂಧವೇನು ಎಂದು ಅವರು ಹೇಳಿದ್ದಾರೆ.

ಸುನಿಲ್ ಕುಮಾರ್ ಮತ್ತು ನಳೀನ್ ಕುಮಾರ್ ಕಟೀಲ್ ಭಾಷಣದ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ. ಬಿಜೆಪಿಯ ಒಳಜಗಳ ಮತ್ತು ಆರ್ ಎಸ್ಎಸ್ ನಾಯಕರ ತಿಕ್ಕಾಟವೇ ಕಾರಣ ಎಂದಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ನದ್ದು ತಪ್ಪಿಲ್ಲ ಎಂದಿದ್ದಾರೆ.

ಬಿಎಲ್ ಸಂತೋಷ್ ಮತ್ತು ಆರ್ ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ನಡುವಿನ ಶೀತಲ ಸಮರದಿಂದಲೇ ಧರ್ಮಸ್ಥಳದಲ್ಲಿ ಇಷ್ಟೆಲ್ಲಾ ಆಗಿದೆ. ಇದಕ್ಕೆ ಬಿಜೆಪಿಯವರೇ ನೇರ ಹೊಣೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡವನ್ನು ಭುವನೇಶ್ವರಿ ಮಾಡಿ ದೌರ್ಜನ್ಯ ಮಾಡಿದ್ರಿ ಎಂದಿದ್ದ ಬಾನು ಮುಷ್ತಾಕ್