ಇನ್ನೇನು ಗಣೇಶ ಹಬ್ಬ ಬಂತು. ಪ್ರತಿಯೊಬ್ಬರೂ ಮನೆಗೆ ಗಣೇಶನ ಮೂರ್ತಿಯನ್ನು ತಂದು ಕೂರಿಸಿ ಪೂಜೆ ಮಾಡುತ್ತಾರೆ. ಮನೆಗೆ ಎಂಥಾ ಗಣೇಶನ ಮೂರ್ತಿ ತರಬೇಕು ಇಲ್ಲಿದೆ ನೋಡಿ ಕೆಲವು ಸಲಹೆ ಸೂಚನೆಗಳು.
ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡುವುದರಿಂದ ನಮಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಗಣೇಶನ ಮೂರ್ತಿ ತರಲು ಮುಹೂರ್ತ ನೋಡಿಕೊಂಡು ತರಬೇಕು. ಅದೇ ರೀತಿ ಗಣೇಶನ ಮೂರ್ತಿ ಮನೆಗೆ ತರುವಾಗ ಸ್ನಾನ ಮಾಡಿ ಪರಿಶುದ್ಧರಾಗಿ ಹೋಗಿ ಕುಟುಂಬದವರೆಲ್ಲಾ ಹೋಗಿ ಗಣೇಶನ ಮೂರ್ತಿಯ ಜಯಘೋಷದೊಂದಿಗೆ ತರಬೇಕು.
ಮನೆಗೆ ಗಣೇಶನ ಮೂರ್ತಿಯನ್ನು ಖರೀದಿಸುವಾಗ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗಣೇಶನ ಮೂರ್ತಿಯು ಲಲಿತಾಸನದಲ್ಲಿರಬೇಕು ಇಲ್ಲವೇ ಕುಳಿತಿರುವ ಭಂಗಿಯಲ್ಲಿರಬೇಕು. ಗಣೇಶನ ಮೂರ್ತಿಯ ಎಡಭಾಗಕ್ಕೆ ಸೊಂಡಿಲು ಇರಬೇಕು. ಗಣೇಶನ ಕೈಯಲ್ಲಿ ಮೋದಕ ಮತ್ತು ಕಾಲ ಬಳಿ ಮೂಷಿಕ ವಾಹನವಿರಬೇಕು. ಇವಿಷ್ಟನ್ನು ಗಮನದಲ್ಲಿಟ್ಟುಕೊಂಡು ಮನೆಗೆ ಗಣೇಶನನ್ನು ಕರೆತನ್ನಿ.