Select Your Language

Notifications

webdunia
webdunia
webdunia
webdunia

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

Rakhi festival

Krishnaveni K

ಬೆಂಗಳೂರು , ಶನಿವಾರ, 9 ಆಗಸ್ಟ್ 2025 (08:42 IST)
Photo Credit: X
ಇಂದು ರಕ್ಷಾ ಬಂಧನವಾಗಿದ್ದು, ಸಹೋದರತ್ವದ ಭಾವ ಬೀರುವ ಹಬ್ಬವಾಗಿದೆ. ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಹೋದರಿಯರು ತಮ್ಮ ಸಂಬಂಧ ಹೀಗೇ ಇರಲಿ ಎಂದು ಬೇಡಿಕೊಳ್ಳುವ ದಿನವಾಗಿದೆ. ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು ಇಲ್ಲಿದೆ ನೋಡಿ ವಿವರ.

ರಕ್ಷಾ ಬಂಧನದ ದಿನ ಸಹೋದರರಿಗೆ ರಾಖಿ ಕಟ್ಟುವುದು ವಾಡಿಕೆ. ಸಹೋದರನಿಗೆ ಆರತಿ ಬೆಳಗಿ ಸಿಹಿ ತಿನಿಸಿ ಕೈಗೆ ರಾಖಿ ಕಟ್ಟಿ ಶುಭ ಹಾರೈಸುತ್ತೇವೆ. ಈ ರೀತಿ ರಾಖಿ ಕಟ್ಟುವಾಗಲೂ ಕೆಲವೊಂದು ನಿಯಮ ಅನುಸರಿಸಬೇಕಾಗುತ್ತದೆ.

ರಾಖಿ ಕಟ್ಟುವಾಗ ಒಟ್ಟು ಮೂರು ಗಂಟುಗಳನ್ನು ಹಾಕಬೇಕು. ಮೂರು ಎನ್ನುವ ಸಂಖ್ಯೆಗೆ ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ವಿಶೇಷ ಮಹತ್ವವಿದೆ. ಮೂರು ಗಂಟುಗಳು ತ್ರಿಮೂರ್ತಿ ದೇವರಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತ. ಈ ದೇವರುಗಳ ಆಶೀರ್ವಾದ ಸಹೋದರನ ಮೇಲಿರಲಿ ಎಂದು ಹಾರೈಸುವ ಸಂಕೇತವಾಗಿದೆ. ಇದು ಸಹೋದರನ ಯಶಸ್ಸು, ಸಮೃದ್ಧಿ, ದೀರ್ಘಾಯುಷ್ಯದ ಸಂಕೇತವಾಗಿದೆ. ಈ ಕಾರಣಕ್ಕೆ ಮೂರು ಗಂಟು ಹಾಕಲೇ ಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ವರಮಹಾಲಕ್ಷ್ಮಿ ಹಬ್ಬದ ದಿನಾಂಕ, ಪೂಜಾ ಮುಹೂರ್ತ ತಿಳಿಯಿರಿ