ಇಂದು ನಾಗರಪಂಚಮಿಯಾಗಿದ್ದು ಈ ಹಬ್ಬ ಎಲ್ಲಾ ಹಬ್ಬಗಳ ಆರಂಭದ ಹಬ್ಬವಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಉಪವಾಸ ವ್ರತ ಮಾಡಿ ಈ ಹಬ್ಬವನ್ನು ಆಚರಿಸುತ್ತಾರೆ. ನಾಗರಪಂಚಮಿಯನ್ನು ಈ ಸಮಸ್ಯೆ ಇರುವವರು ತಪ್ಪದೇ ಆಚರಿಸಬೇಕು.
ನಾಗರಪಂಚಮಿ ಎನ್ನುವುದು ನಾಗನಿಗೆ ವಿಶೇಷವಾದ ಹಬ್ಬವಾಗಿದೆ. ನಾಗದೇವರಿಗೆ ಹಾಲೆರೆದು, ಅರಿಶಿನ ಹಚ್ಚಿ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಹೆಣ್ಣು ಮಕ್ಕಳು ಉಪವಾಸ ವ್ರತವಿದ್ದು ನಾಗರಪಂಚಮಿಯನ್ನು ಆಚರಿಸುತ್ತಾರೆ.
ನಾಗರಪಂಚಮಿ ಹಬ್ಬಕ್ಕೆ ಅದರದ್ದೇ ಆದ ವಿಶೇಷತೆಯಿದೆ. ನಾಗ ದೋಷವಿರುವವರು ಇಂದು ನಾಗನಿಗೆ ಪೂಜೆ ಮಾಡುವುದು ಉತ್ತಮ. ನಾಗದೋಷದಿಂದಾಗಿ ವಿವಾಹಾದಿ ಸಮಸ್ಯೆಗಳು, ಸಂತಾನ ಸಮಸ್ಯೆ ಬರಬಹುದಾಗಿದೆ. ಹೀಗಾಗಿ ಈ ದೋಷವಿದ್ದವರು ತಪ್ಪದೇ ಇಂದು ನಾಗನಿಗೆ ಪೂಜೆ ಮಾಡಿ.
ವಿವಾಹಿತ ಸ್ತ್ರೀಯರು ಪತಿಯ ದೀರ್ಘಾಯುಶ್ಯಕ್ಕಾಗಿ ನಾಗನ ಪೂಜೆ ಮಾಡಬೇಕು. ರೈತಾಪಿ ವರ್ಗದವರು ಬೆಳೆ ನಾಶವಾಗದಂತೆ ನಾಗದೇವರ ಮೊರೆ ಹೋಗುತ್ತಾರೆ. ಇದಲ್ಲದೆ ಸುದೀರ್ಘ ಕಾಲದ ಅನಾರೋಗ್ಯ, ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆ ಇರುವವರೂ ಇಂದು ತಪ್ಪದೇ ನಾಗನಿಗೆ ಪೂಜೆ ಮಾಡಿ.