ಬೆಂಗಳೂರು: ಈ ಬಾರಿ ಯುಗಾದಿ ಹಬ್ಬದ ಆಚರಣೆ ನಾಳೆ ಮಾಡಬೇಕೋ ನಾಡಿದ್ದು ಮಾಡಬೇಕೋ ಎಂದು ಹಲವರಲ್ಲಿ ಗೊಂದಲಗಳಿವೆ. ಆ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಪಾಲ್ಗುಣ ಮಾಸ ಮುಗಿದ ತಕ್ಷಣ ಚೈತ್ರ ಮಾಸ ಶುರುವಾಗುತ್ತದೆ. ಇಂದು ಪಾಲ್ಗುಣ ಮಾಸದ ಕೊನೆಯ ದಿನವಾಗಿದ್ದು, ಅಮವಾಸ್ಯೆಯಾಗಿದೆ. ನಾಳೆಯಿಂದ ಚೈತ್ರ ಮಾಸ ಆರಂಭವಾಗಲಿದೆ.
ಸಾಮಾನ್ಯವಾಗಿ ಚೈತ್ರಮಾಸದ ಆರಂಭದ ದಿನವನ್ನು ಯುಗಾದಿ ಹಬ್ಬವಾಗಿ ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಮೊದಲ ದಿನವೇ ನಮಗೆ ಹೊಸ ಸಂವತ್ಸರದ ಆರಂಭವಾಗಿದೆ. ಹೀಗಾಗಿ ನಾಳೆಯನ್ನೇ ಯಗಾದಿ ಹಬ್ಬವಾಗಿ ಆಚರಿಸಬಹುದು.
ಪ್ರತಿಪಾದ ತಿಥಿ ಇಂದು ಅಪರಾಹ್ನ 4.27 ಕ್ಕೆ ಆರಂಭವಾಗಿ ನಾಳೆ ಅಂದರೆ ಮಾರ್ಚ್ 30 ರ 12.49 ರವರೆಗಿದೆ. ಇನ್ನು ಯುಗಾದಿ ಹಬ್ಬದ ಪೂಜೆ ಮಾಡಲು ನಾಳೆ ಬೆಳಿಗ್ಗೆ 6.30 ರಿಂದ 8.45 ರವರೆಗೆ ಪ್ರಶಸ್ತವಾದ ಸಮಯವಾಗಿದೆ.