Select Your Language

Notifications

webdunia
webdunia
webdunia
webdunia

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Lord Shiva

Krishnaveni K

ಬೆಂಗಳೂರು , ಸೋಮವಾರ, 24 ಫೆಬ್ರವರಿ 2025 (08:40 IST)
ಬೆಂಗಳೂರು: ಮಹಾಶಿವರಾತ್ರಿ ಹಬ್ಬ 2025  ಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹಾಶಿವನನ್ನು ಆರಾಧಿಸುವ ದಿನ ಯಾವಾಗ, ಮುಹೂರ್ತ ಎಷ್ಟು ಗಂಟೆಗೆ ಇಲ್ಲಿದೆ ವಿವರ.

ಮಹಾ ಶಿವರಾತ್ರಿ 2025 ಇದೇ ಬುಧವಾರ ಅಂದರೆ ಮಾರ್ಚ್ 26 ರಂದು ನಡೆಯಲಿದೆ. ದಿನವಿಡೀ ಉಪವಾಸವಿದ್ದು ಮಹಾಶಿವನ ಪ್ರಾರ್ಥನೆ ಮಾಡುವುದರಿಂದ ಭಗವಂತನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ.

ಮುಹೂರ್ತ
ಶಿವರಾತ್ರಿಯಲ್ಲಿ ನಿಶಿತ ಕಾಲ ಪೂಜೆ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಮಧ್ಯರಾತ್ರಿ ಮಾಡಲಾಗುತ್ತದೆ. ಫೆಬ್ರವರಿ 26 ರ ರಾತ್ರಿ ಅಂದರೆ ಫೆಬ್ರವರಿ 27 ಮಧ್ಯರಾತ್ರಿ 12.09 ರಿಂದ 12.59 ರವರೆಗೆ ಮಾಡಬೇಕು. ಫೆಬ್ರವರಿ 26 ರಾತ್ರಿ 11.08 ರಿಂದ ಶಿವನಿಗೆ ವಿಶೇಷವಾದ ಚತುರ್ಥಿ ತಿಥಿ ಆರಂಭವಾಗುತ್ತದೆ. ಮರುದಿನ 8.54 ಕ್ಕೆ ಚತುರ್ಥಿ ತಿಥಿ ಕೊನೆಯಾಗುತ್ತದೆ.

ಮಹಾಶಿವರಾತ್ರಿಯಂದು ಶಿವನ ಹಾಡು, ಭಜನೆ, ಪೂಜೆ ಮೂಲಕ ಶಿವನ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಮಹಾ ಶಿವರಾತ್ರಿ ಅತ್ಯಂತ ಪುಣ್ಯ ಕಾಲವಾಗಿದ್ದು ಈ ದಿನ ಶಿವನ ಆರಾಧನೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು