Select Your Language

Notifications

webdunia
webdunia
webdunia
webdunia

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

Tulsi festival

Krishnaveni K

ಬೆಂಗಳೂರು , ಬುಧವಾರ, 13 ನವೆಂಬರ್ 2024 (08:47 IST)
Photo Credit: Instagram
ಬೆಂಗಳೂರು: ತುಳಸಿ ಹಬ್ಬದಂದು ಸಂಜೆ ಹೊತ್ತು ನೆಲ್ಲಿಕಾಯಿ ಇಟ್ಟು ದೀಪವನ್ನು ಹಚ್ಚಿಡುವ ಸಂಪ್ರದಾಯ ಹಲವು ಕಡೆ ಆಚರಿಸಲಾಗುತ್ತದೆ. ಆದರೆ ನೆಲ್ಲಿಕಾಯಿ ದೀಪ ಹಚ್ಚುವುದು ಯಾಕೆ ಎಂದು ತಿಳಿದುಕೊಳ್ಳುವುದು ಮುಖ್ಯ.

ತುಳಸಿ ಹಬ್ಬದಂದು ವಿಶೇಷವಾಗಿ ಮಹಾವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಈ ದಿನ ತುಳಸಿ ಕಟ್ಟೆಗೆ ನೆಲ್ಲಿ ಗಿಡದ ಟೊಂಗೆಯನ್ನು ಇಟ್ಟು ದೀಪವನ್ನು ಹಚ್ಚಿ ಪೂಜೆ ಮಾಡಲಾಗುತ್ತದೆ. ನೆಲ್ಲಿಕಾಯಿ ಇರುವ ಟೊಂಗೆಯನ್ನೇ ಇಟ್ಟು ಪೂಜೆ ಮಾಡಿದರೆ ಶ್ರೇಷ್ಠವಾಗಿದ್ದು, ವಿಶೇಷ ಫಲಗಳನ್ನೂ ಪಡೆಯಬಹುದು.

ದಾಂಪತ್ಯ ಜೀವನದಲ್ಲಿ ಸಮಸ್ಯೆ ಇರುವವರು, ದಾಂಪತ್ಯ ನೆಮ್ಮದಿ, ಸುಖ, ಅಭಿವೃದ್ಧಿಗಾಗಿ ನೆಲ್ಲಿಕಾಯಿಯನ್ನು ತುಳಸಿ ಕಟ್ಟೆಯಲ್ಲಿಟ್ಟು ಪೂಜೆ ಮಾಡಿದರೆ ಉತ್ತಮ. ಜೊತೆಗೆ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ರೀತಿ ಪೂಜೆ ಮಾಡುವುದರಿಂದ ಉತ್ತಮ ಫಲಗಳನ್ನು ಪಡೆಯುತ್ತೀರಿ.

ಮನೆಯಲ್ಲಿ ಮಂಗಳ ಕಾರ್ಯ ಮಾಡುವುದಿದ್ದರೆ ಮನೆ ಮಗಳ ಕೈಯಲ್ಲಿ ನೆಲ್ಲಿಕಾಯಿ, ದೀಪವಿಟ್ಟು ತುಳಸಿಗೆ ಪೂಜೆ ಮಾಡಲು ಹೇಳಿ. ಇದರಿಂದ ಒಳಿತಾಗುವುದು. ಹಿಂದೂ ಧರ್ಮದಲ್ಲಿ ತುಳಸಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಅದರಲ್ಲೂ ಹೆಣ್ಣು ಮಕ್ಕಳು ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್