Select Your Language

Notifications

webdunia
webdunia
webdunia
webdunia

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

Shraddh

Krishnaveni K

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (09:15 IST)
ಬೆಂಗಳೂರು: ಇಂದು ಮಹಾಲಯ ಅಮವಾಸ್ಯೆಯಾಗಿದ್ದು, ಪಿತೃಪಕ್ಷದ ಕೊನೆಯ ದಿನವಾಗಿದೆ. ಈ ದಿನ ನಮ್ಮನ್ನು ಗತಿಸಿದ ಪಿತೃಗಳಿಗೆ ತರ್ಪಣ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಮಹಾಲಯ ಅಮವಾಸ್ಯೆ ಎಂದರೆ ನವರಾತ್ರಿ ಆರಂಭ ಎಂದೇ ಲೆಕ್ಕ. ಇಂದು ಪಿತೃಪಕ್ಷದ ಕೊನೆಯ ದಿನವಾಗಿದ್ದು, ಗತಿಸಿ ಹೋದ ಹಿರಿಯರಿಗೆ ಎಳ್ಳು ನೀರು ಬಿಟ್ಟು, ಎಡೆ ಇಟ್ಟರೆ ಪಿತೃ ದೋಷಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಗತಿಸಿ ಹೋದ ತಂದೆ-ತಾಯಿಗಳಿಗೆ ಆಯಾ ದಿನಕ್ಕೆ ಶ್ರಾದ್ಧ ಕಾರ್ಯ ಮಾಡಬಹುದು.

ಆದರೆ ಕೇವಲ ತಂದೆ-ತಾಯಿಯ ಕಾರ್ಯ ಮಾಡುವುದರಿಂದ ಕರ್ಮ ಕಳೆದಂತಲ್ಲ. ನಮ್ಮ ಪೂರ್ವಜರಿಗೂ ಈ ಒಂದು ದಿನ ಆಹಾರ ಕೊಡುವುದು ನಮ್ಮ ಕರ್ತವ್ಯವಾಗಿದೆ. ಪೂರ್ವಜರಿಗಾಗಿ ಮೀಸಲಾದ ದಿನ ಇದಾಗಿದ್ದು, ಇಂದು ಭಕ್ತಿಯಿಂದ ಪಿತೃಗಳ ಪೂಜೆ ಮಾಡಿದಲ್ಲಿ ಕುಟುಂಬದಲ್ಲಿ ಬರುವಂತಹ ಎಲ್ಲಾ ದೋಷಗಳೂ ನಿವಾರಣೆಯಾದಂತೆ.

ಎಲ್ಲಕ್ಕಿಂತ ಶ್ರೇಷ್ಠ ಪಿಂಡ ದಾನ. ಹೀಗಾಗಿ ನಾವು ಯಾರಿಗೆ ಪೂಜೆ ಮಾಡುತ್ತೇವೋ, ಬಿಡುತ್ತೇವೋ.. ಆದರೆ ನಮ್ಮ ಪೂರ್ವಜರನ್ನು ಮರೆಯದೇ ಈ ಒಂದು ದಿನ ಪೂಜೆ ಮಾಡಿದಲ್ಲಿ ನಮ್ಮ ತಲೆತಲಾಂತರಕ್ಕೂ ಯಾವುದೇ ದೋಷ ಬಾರದಂತೆ ಕಾಪಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು