Select Your Language

Notifications

webdunia
webdunia
webdunia
webdunia

ಜೀವನದಲ್ಲಿ ಈ ಖುಷಿ ಬೇಕೆಂದರೆ ಶಿವ ತಾಂಡವ ಸ್ತೋತ್ರ ಓದಿ

Astrology

Krishnaveni K

ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2024 (08:41 IST)
ಬೆಂಗಳೂರು: ಸೋಮವಾರ ಶಿವನಿಗೆ ಪ್ರಿಯವಾದ ದಿನವಾಗಿದ್ದು, ಶಿವನನ್ನು ಪೂಜಿಸಲು ಅನೇಕ ಮಂತ್ರಗಳಿವೆ. ಅದರಲ್ಲಿ ಶಿವ ತಾಂಡವ ಸ್ತೋತ್ರವೂ ಒಂದು. ಈ ಸ್ತೋತ್ರ ಅತ್ಯಂತ ಜನಪ್ರಿಯವಾಗಿದ್ದು ಇದನ್ನು ಓದುವುದರಿಂದ ಏನು ಫಲ ಎಂದು ನೋಡಿ.

ಶಿವ ತಾಂಡವ ಸ್ತೋತ್ರವನ್ನು ಅಪಾರ ಶಿವ ಭಕ್ತನಾದ ರಾವಣ. ಆತ ರಾಕ್ಷಸನೇ ಆಗಿದ್ದರೂ ಶಿವನ ಪರಮ ಭಕ್ತನಾಗಿದ್ದ. ಶಿವ ತಾಂಡವ ಸ್ತೋತ್ರ ಎಷ್ಟು ಪವರ್ ಫುಲ್ ಎಂದರೆ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡುವ ಶಕ್ತಿ ಹೊಂದಿದೆ.

ಜಟಾಟವೀಗಲಜ್ಜಲ ಪ್ರವಾಹಪಾವಿತಸ್ಥಲೆ
ಗಲೇವಲಂಬ್ಯ ಲಂಬಿತಾ ಭುಜಂಗತುಂಗಮಾಲಿಕಾಮ್

ಈ ರೀತಿ ಆರಂಭವಾಗುವ ಶಿವ ತಾಂಡವ ಸ್ತೋತ್ರವನ್ನು ಪ್ರತಿನಿತ್ಯ ಓದುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಜೊತೆಗೆ ಹಣಕಾಸಿನ ಸಮಸ್ಯೆಗಳು ದೂರವಾಗಿ ಸಮೃದ್ದಿ ಕಾಣುವಿರಿ. ಇನ್ನು, ವಿವಾಹ ಸಂಬಂಧ ಅಡೆತಡೆಗಳಿದ್ದರೆ 51 ದಿನ ಶಿವ ತಾಂಡವ ಸ್ತೋತ್ರ ಓದುವುದರಿಂದ ಪರಿಹಾರ ಕಂಡುಕೊಳ್ಳಬಹುದು.
 
ಕುಟುಂಬ ಸದಸ್ಯರ ನಡುವೆ ಸದಾ ಕಲಹ, ಮನಸ್ತಾಪಗಳಾಗುತ್ತಿದ್ದರೆ ಶಿವ ತಾಂಡವ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳುವಿರಿ. ವೃತ್ತಿಪರ ನಿಮ್ಮ ಮುನ್ನಡೆಗೆ ಅಡೆತಡೆಯಿದ್ದರೂ ಶಿವ ತಾಂಡವ ಸ್ತೋತ್ರ ಓದುವುದರಿಂದ ಯಶಸ್ಸು ಕಾಣುವಿರಿ. ಮುಖ್ಯವಾಗಿ ಕಾನೂನು ಸಂಬಂಧೀ ಹೋರಾಟಗಳು, ಕೋರ್ಟ ವ್ಯಾಜ್ಯಗಳಲ್ಲಿ ಜಯ ಸಿಗಬೇಕೆಂದರೆ ಶಿವ ತಾಂಡವ ಸ್ತೋತ್ರವನ್ನು ಓದಿ. ಅಲ್ಲದೆ, ಮಕ್ಕಳಿಗೂ ಇದನ್ನು ಓದಿಸುವುದು ಅಥವಾ ಕೇಳಿಸುವುದರಿಂದ ಅವರು ಯಶಸ್ಸು ಸಾಧಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?