Publish Date: Fri, 27 Sep 2024 (08:38 IST)
Updated Date: Fri, 27 Sep 2024 (08:41 IST)
ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಹಣಕಾಸಿನ ವಿಚಾರದಲ್ಲಿ ಸಮೃದ್ಧಿ ಇರಬೇಕೆಂಬ ಬಯಕೆಯಿರುತ್ತದೆ. ದಾರಿದ್ರ್ಯ ದೂರವಾಗಿ ಸಮೃದ್ಧಿ ಕಾಣಬೇಕಾದರೆ ಕುಬೇರ ಮಂತ್ರವನ್ನು ಪಠಿಸಬೇಕು. ಕುಬೇರ ಮಂತ್ರ ಯಾವುದು, ಹೇಗೆ ಪಠಿಸಬೇಕು ಇಲ್ಲಿದೆ ವಿವರ.
ಲಕ್ಷ್ಮೀ ದೇವಿ ಸಂಪತ್ತಿನ ಅಧಿದೇವತೆಯಾದರೆ ಕುಬೇರ ಸಂಪತ್ತಿಗೆ ರಾಜನಾಗಿರುತ್ತಾನೆ. ಸಂಪತ್ತು ವೃದ್ಧಿಯಾಗಬೇಕಾದರೆ ಲಕ್ಷ್ಮೀ ದೇವತೆಯನ್ನು ಪೂಜೆ ಮಾಡುವಂತೆಯೇ ಕುಬೇರನನ್ನೂ ಅಷ್ಟೇ ಭಕ್ತಿಯಿಂದ ಪೂಜೆ ಮಾಡಬೇಕು. ಹೀಗಾಗಿ ಕುಬೇರ ಮಂತ್ರವನ್ನು ಓದಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಓಂ ಅಕ್ಷಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ
ಧನಧಾನ್ಯ ಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ
ಅಷ್ಟಲಕ್ಷ್ಮಿ ಕುಬೇರ ಮಂತ್ರ ಹೀಗಿದೆ:
ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ ಲಕ್ಷ್ಮಿ ಮಮ ಗೃಹೇ ಧನಂ ಪುರಯ ಪುರಯ ನಮಃ
ಇ ಎರಡೂ ಮಂತ್ರಗಳನ್ನು ದಕ್ಷಿಣಾಭಿಮುಖವಾಗಿ ಕುಳಿತು ಸುಮಾರು 3 ತಿಂಗಳು ನಿರಂತರವಾಗಿ ಪಠಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ದೂರವಾಗಿ ಧನ-ಧಾನ್ಯ ಸಮೃದ್ಧಿ ಕಂಡುಬರುವುದು.