Publish Date: Tue, 01 Oct 2024 (08:40 IST)
Updated Date: Tue, 01 Oct 2024 (08:46 IST)
ಬೆಂಗಳೂರು: ಸಕಲ ರೋಗಗಳ ಪರಿಹಾರಕ್ಕಾಗಿ ದೇವಿ ದುರ್ಗೆಯನ್ನು ಈ ಒಂದು ಮಂತ್ರವನ್ನು ಹೇಳಿ ಜಪಿಸಿದರೆ ಒಳಿತಾಗುತ್ತದೆ. ಅದು ಯಾವ ಮಂತ್ರವನ್ನು ಮತ್ತು ಹೇಗೆ ಪಠಿಸಬೇಕು ಇಲ್ಲಿದೆ ವಿವರ.
ದುರ್ಗಾದೇವಿಯ ಪೂಜೆ ಮಾಡುವುದು ನವರಾತ್ರಿ ಸಂದರ್ಭದಲ್ಲಿ ವಿಶೇಷವಾಗಿದೆ. ದುರ್ಗೆ ಎಂದರೆ ಸರ್ವಶಕ್ತಳು. ಅಪಾರ ಶಕ್ತಿ, ಧೈರ್ಯ ನೀಡುವವಳು. ದುರ್ಗಾದೇವಿಯ ಪ್ರಮುಖ ಮಂತ್ರಗಳಲ್ಲಿ ದುರ್ಗ ಸಪ್ತಶತಿ ಮಂತ್ರ ಪ್ರಮುಖವಾದುದು. ಇದನ್ನು ಪಠಿಸುವುದರಿಂದ ಜೀವನದಲ್ಲಿ ಸಕಲ ರೋಗಗಳು ನಿವಾರಣೆಯಾಗಿ ಶಕ್ತಿವಂತರಾಗುತ್ತೀರಿ.
ದುರ್ಗಾ ಸಪ್ತಶತಿ ಮಂತ್ರಗಳಲ್ಲಿ ರೋಗ ನಿವಾರಣೆಗಾಗಿ ಈ ಮಂತ್ರವನ್ನು ಜಪಿಸಬೇಕು. ಅದು ಹೀಗಿದೆ:
ರೋಗಾನಶೇಷಾನಪಹಂಸಿ ತುಷ್ಟಾ
ರುಷ್ಟಾ ತು ಕಾಮಾನ್ ಸಕಲಾನಭೀಷ್ಟಾನ್
ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ
ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾಂತಿ
ಈ ಮಂತ್ರವನ್ನು ಕೈಯಲ್ಲಿ ಜಪ ಮಾಲೆ ಹಿಡಿದು ಕುಟುಂಬದವರೆಲ್ಲಾ ಒಟ್ಟಿಗೇ ಕುಳಿತು ಒಟ್ಟಾಗಿ ಈ ಮಂತ್ರವನ್ನು ಜಪಿಸುವುದರಿಂದ ರೋಗ-ರುಜಿನಾದಿಗಳು ದೂರವಾಗಿ ಕುಟುಂಬ ಸೌಖ್ಯ ಪಡೆಯುವಿರಿ. ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳೂ ನಿವಾರಣೆಯಾಗುತ್ತದೆ.