Select Your Language

Notifications

webdunia
webdunia
webdunia
webdunia

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Sankranthi

Krishnaveni K

ಬೆಂಗಳೂರು , ಸೋಮವಾರ, 13 ಜನವರಿ 2025 (12:51 IST)
ಬೆಂಗಳೂರು: ಸಂಕ್ರಾಂತಿ ದಿನ ಬಂದೇ ಬಿಟ್ಟಿದೆ. ಸುಗ್ಗಿ ಹಬ್ಬಕ್ಕೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದು ಶುಭದಾಯಕವಾಗಿದೆ. ಯಾವೆಲ್ಲಾ ವಸ್ತುಗಳನ್ನು ದಾನ ಮಾಡಬೇಕು ಇಲ್ಲಿದೆ ಡೀಟೈಲ್ಸ್.

ಸಂಕ್ರಾಂತಿ ಹಬ್ಬದಂದು ಎಣ್ಣೆ ಸ್ನಾನ ಮಾಡಿ ಭಕ್ತಿಯಿಂದ ಪೂಜೆ ಮಾಡುವುದು, ಎಳ್ಳು-ಬೆಲ್ಲ ಬೀರಿ ಒಳ್ಳೆ ಮಾತನಾಡು ಎಂದು ಪರಸ್ಪರ ಹರಸುವುದು ಸಾಮಾನ್ಯ. ಈ ದಿನಗಳಲ್ಲಿ ಮಾಡುವ ಒಳ್ಳೆಯ ಕೆಲಸಗಳಿಂದ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಸಂಕ್ರಾಂತಿ ಹಬ್ಬದಲ್ಲಿ ಪ್ರಮುಖವಾಗಿ ಸೂರ್ಯನ ಆರಾಧನೆ ಮಾಡಲಾಗುತ್ತದೆ. ಈ ದಿನ ವಿಶೇಷವಾಗಿ ಅಕ್ಕಿಯಿಂದ ಮಾಡಿದ ಖಿಚಡಿ, ಪಾಯಸ ದಾನ ಮಾಡುವುದರಿಂದ ಅನ್ನಪೂರ್ಣೇಶ್ವರಿಯ ಅನುಗ್ರಹ ಸಿಗುತ್ತದೆ.

ಅದೇ ರೀತಿ ಈ ದಿನ ತುಪ್ಪ ದಾನ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ. ಬಡ ಜನರಿಗೆ ಆಹಾರ ದಾನ ಮಾಡುವುದರಿಂದ ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹ ಸಿಗುತ್ತದೆ. ಇದರಿಂದ ಮನೆಯಲ್ಲಿ ಆಹಾರ ಕೊರತೆಯೂ ಆಗಲ್ಲ. ಬಡವರಿಗೆ ಸಾಸಿವೆ ದಾನ ಮಾಡಿದರೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಅದೇ ರೀತಿ ಹಾಲು, ಮೊಸರು ದಾನ ಮಾಡಿದರೆ ಮನೆಯಲ್ಲಿ ದಾರಿದ್ರ್ಯ ನಿವಾರಣೆಯಾಗುತ್ತದೆ. ಹೀಗಾಗಿ ಇವುಗಳನ್ನು ತಪ್ಪದೇ ದಾನ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ