Select Your Language

Notifications

webdunia
webdunia
webdunia
webdunia

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

Gavi Gangadhareshwara

Krishnaveni K

ಬೆಂಗಳೂರು , ಮಂಗಳವಾರ, 25 ಫೆಬ್ರವರಿ 2025 (09:39 IST)
ಬೆಂಗಳೂರು: ನಾಳೆ ಶಿವರಾತ್ರಿಯಾಗಿದ್ದು ಶಿವನ ದೇವಾಲಯಕ್ಕೆ ಭೇಟಿ ನೀಡುವವರಿಗೆ ಬೆಂಗಳೂರಿನಲ್ಲಿರುವ ಟಾಪ್ 5 ಶಿವ ದೇವಾಲಯಗಳ ಪರಿಚಯ ಇಲ್ಲಿದೆ ನೋಡಿ.

ಕಾಡು ಮಲ್ಲೇಶ್ವರ
ಬೆಂಗಳೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಕಾಡು ಮಲ್ಲೇಶ್ವರ 17 ನೇ ಶತಮಾನದ ಪುರಾತನ ದೇವಾಲಯವಾಗಿದ್ದು ಶಿವನಿಗೆ ಸಮರ್ಪಿತವಾಗಿದೆ. ಇದು ಮಲ್ಲೇಶ್ವರದ ಸಂಪಿಗೆ ಬಡಾವಣೆಯಲ್ಲಿದೆ.

ಗವಿ ಗಂಗಾಧರೇಶ್ವರ
ಬಸವನಗುಡಿ ಸಮೀಪವಿರುವ ಗವಿ ಗಂಗಾಧರೇಶ್ವರ ದೇವಾಲಯ ಅತ್ಯಂತ ಪುರಾತನ ದೇವಾಲಯವಾಗಿದೆ. ಇದನ್ನು ಗೌತಮ ಮಹರ್ಷಿಗಳು ಮತ್ತು ಭಾರದ್ವಾಜ ಮುನಿಗಳು ನಿರ್ಮಿಸಿದರು ಎಂಬ ನಂಬಿಕೆಯಿದೆ. ಕೆಂಪೇಗೌಡರ ಕಾಲದಲ್ಲಿ ಇದನ್ನು ನವೀಕರಿಸಲಾಯಿತು.

ಹಲಸೂರು ಶಿವ ದೇವಾಲಯ
ಹಲಸೂರಿನಲ್ಲಿರುವ ಸೋಮೇಶ್ವರ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ಕಾಲ ಕ್ರಮೇಣ ವಿಜಯನಗರ ಸಾಮ್ರಾಜ್ಯದ ಕೊನೆಯಲ್ಲಿ ಹಿರಿಯ ಕೆಂಪೇಗೌಡ II ಅವರ ಕಾಲದಲ್ಲಿ ಅಭಿವೃದ್ಧಿಗೊಳಿಸಲಾಯಿತು ಎನ್ನಲಾಗಿದೆ.

ಶಿವೋಹಂ ಶಿವ ದೇವಾಲಯ
ಬೆಂಗಳೂರಿನಲ್ಲಿ ಇತ್ತೀಚೆಗೆ ನಿರ್ಮಿತವಾದ ದೇವಾಲಯವಾದರೂ ಶಿವೋಹಂ ಶಿವ ದೇವಾಲಯ 65 ಅಡಿ ಶಿವನ ಮೂರ್ತಿಯಿಂದಾಗಿ ಪ್ರಖ್ಯಾತಿ ಪಡೆದಿದೆ. ಇಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಓಲ್ಡ್ ಏರ್ ಪೋರ್ಟ್ ರೋಡ್, ಬೆಂಗಳೂರಿನಲ್ಲಿ ಈ ದೇವಾಲಯವಿದೆ.

ದೊಡ್ಡ ಬಸವನಗುಡಿ
ದೊಡ್ಡ ಬಸವನಗುಡಿ ಎಂಬುದು ಬಸವನ ಮೂರ್ತಿಯಿಂದಾಗಿ ಫೇಮಸ್ ಆದರೂ ಇಲ್ಲಿ ಪ್ರಮುಖವಾಗಿ ಶಿವನನ್ನು ಆರಾಧಿಸಲಾಗುತ್ತದೆ. ಶಿವನಿದ್ದಲ್ಲಿ ಬಸವನಿರಲೇಬೇಕಲ್ಲವೇ? ಬಸವನಗುಡಿಯಲ್ಲಿರುವ ಈ ದೇವಾಲಯ ಬೆಂಗಳೂರಿನ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ