ಬೆಂಗಳೂರು: ಇಂದು ರಕ್ಷಾ ಬಂಧನವಾಗಿದ್ದು, ಅಣ್ಣ-ತಂಗಿಯರ ಸಂಬಂಧ ಸಾರುವ ಹಬ್ಬವಾಗಿದೆ. ತಮಗೆ ಪೂಜೆ ಮಾಡುವ ತಂಗಿಯರಿಗೆ ಅಣ್ಣಂದಿರು ಕೊಡಬಹುದಾದ 5 ಗಿಫ್ಟ್ ಗಳು ಏನಾಗಬಹುದು ಎಂಬ ಐಡಿಯಾ ಇಲ್ಲದೆ ನೋಡಿ.
 
									
			
			 
 			
 
 			
					
			        							
								
																	ಜ್ಯುವೆಲ್ಲರಿ
	ಯಾವ ಹುಡುಗಿಗೆ ತಾನೇ ಜ್ಯುವೆಲ್ಲರಿ ಎಂದರೆ ಇಷ್ಟವಿರಲಿಲ್ಲ. ಅದೂ ಸಹೋದರ ನೀಡುವ ಗಿಫ್ಟ್ ಎಂದರೆ ತಂಗಿಯಂದಿರಿಗೆ ವಿಶೇಷ ಮಮಕಾರವಿರುತ್ತದೆ. ನೀವೇ ಸ್ಪೆಷಲ್ಲಾಗಿ ಕಸ್ಟಮೈಸ್ ಮಾಡಿದ ಜ್ಯುವೆಲ್ಲರಿ ಉಡುಗೊರೆ ಕೊಡಬಹುದು.
 
									
										
								
																	ಒಂದು ದಿನದ ಬ್ಯೂಟಿ ಪಾರ್ಲರ್ ಖರ್ಚು ನೋಡಿಕೊಳ್ಳಿ
	ಸಹೋದರಿಗೆ ಒಂದು ದಿನ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿ ಆಕೆಯ ಹೇರ್ ಕಟಿಂಗ್, ಐಬ್ರೋ, ಫೇಷಿಯಲ್ ಇತ್ಯಾದಿ ಸಂಪೂರ್ಣ ಖರ್ಚನ್ನು ವಹಿಸಿಕೊಂಡು ಖುಷಿ ಕೊಡಬಹುದು.
 
									
											
									
			        							
								
																	ಚಪ್ಪಲಿ
	ಎಲ್ಲಾ ಹುಡುಗಿಯರಿಗೂ ಥರ ಥರದ ಚಪ್ಪಲಿ ಧರಿಸಲು ಇಷ್ಟ. ನಿಮ್ಮ ಸಹೋದರಿಯ ಡ್ರೆಸ್ ಗೆ ಅನುಗುಣವಾಗಿ ಒಂದು ಸ್ಟೈಲಿಶ್ ಚಪ್ಪಲಿ ಅಥವಾ ಶೂಸ್ ಉಡುಗೊರೆಯಾಗಿ ನೀಡಬಹುದು.
 
									
			                     
							
							
			        							
								
																	ಸ್ಟೇಷನರಿ ಐಟಂಗಳು
	ನಿಮ್ಮ ಸಹೋದರಿ ಓದುತ್ತಿದ್ದರೆ ಆಕೆಗೆ ವಿಶೇಷ ನೋಟ್ ಬುಕ್, ಪೆನ್, ಪೌಚ್ ಅಥವಾ ಯಾವುದೇ ಸ್ಟೇಷನರಿ ಐಟಂಗಳನ್ನು ನೀಡಬಹುದು. ಅದರಲ್ಲೂ ನೀವೇ ಸ್ಪೆಷಲ್ ಆಗಿ ಕಸ್ಟಮೈಸ್ಡ್ ಮಾಡಿಕೊಟ್ಟರೆ ಆಕೆ ಇನ್ನಷ್ಟು ಖುಷಿಯಾಗಬಹುದು.
 
									
			                     
							
							
			        							
								
																	ಡ್ರೆಸ್
	ಸಾಮಾನ್ಯವಾಗಿ ಎಲ್ಲರೂ ಡ್ರೆಸ್ ಕೊಡುವುದು ಮಾಡೇ ಮಾಡುತ್ತಾರೆ. ಆದರೆ ಆಕೆ ಸಾಮಾನ್ಯವಾಗಿ ಜೀನ್ಸ್, ಟಾಪ್, ಸಲ್ವಾರ್ ಹಾಕುತ್ತಿದ್ದರೆ ನೀವು ಒಂದು ಡಿಸೈನರ್ ಸೀರೆ ಕೊಟ್ಟು ನೋಡಿ. ಸಹೋದರ ಕೊಟ್ಟ ಸೀರೆ ಎಂದು ಯಾವತ್ತೂ ಆಕೆ ಖುಷಿಯಿಂದ ಹೊತ್ತು ತಿರುಗುತ್ತಾರೆ!