ಬೆಂಗಳೂರು: ಶ್ರಾವಣ ಮಾಸ ಆರಂಭವಾಗಿದ್ದು, ಇಂದಿನಿಂದ ಹಬ್ಬಗಳ ಸೀಸನ್ ಶುರುವಾಗುತ್ತಿದೆ. ಇಂದು ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ನಾಗರಪಂಚಮಿ ಮಕ್ಕಳಾಗದೇ ಇರುವವರಿಗೆ, ವಿವಾಹ ವಿಳಂಬವಾಗುತ್ತಿದ್ದರೆ ವಿಶೇಷವಾಗಿದೆ. ಯಾಕೆ ಎಂದು ಇಲ್ಲಿ ನೋಡಿ.
ನಾಗರಪಂಚಮಿಯಂದು ವಿಶೇಷವಾಗಿ ನಾಗನಿಗೆ ಪೂಜೆ ಸಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ನಾಗದೋಷವಿದ್ದರೆ ಮಕ್ಕಳಾಗಲು ತೊಂದರೆ, ವಿವಾಹಕ್ಕೆ ವಿಳಂಬವಾಗುವುದು, ದಾಂಪತ್ಯದಲ್ಲಿ ಕಲಹ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಜೊತೆಗೆ ಮನಸ್ಸಿಗೂ ನೆಮ್ಮದಿಯಿರುವುದಿಲ್ಲ.
ಹೀಗಾಗಿ ನಾಗರಪಂಚಮಿ ದಿನ ಭಕ್ತಿಯಿಂದ ನಾಗನ ಪೂಜೆ ಮಾಡಿದರೆ ಇಂತಹ ಸಮಸ್ಯೆಗಳು ದೂರವಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾಗರಪಂಚಮಿ ದಿನ ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಮಡಿಯಲ್ಲಿರಬೇಕು. ಈ ದಿನ ಉಪವಾಸ ವ್ರತ ಆಚರಣೆ ಮಾಡಬೇಕು. ಮರದ ಪೀಠದ ಮೇಲೆ ಹಾವಿನ ವಿಗ್ರಹವಿಟ್ಟು ನಾಗದೇವರಿಗೆ ಅಕ್ಕಿ, ಅರಶಿಣ, ಕುಂಕು, ಅಕ್ಕಿ, ಹೂವುಗಳನ್ನು ಅರ್ಪಿಸಿ ಪೂಜೆ ಮಾಡಬೇಕು. ಮನೆಯ ಹತ್ತಿರ ಹಾವಿನ ಹುತ್ತವಿದ್ದರೆ ಹಾಲೆರೆದು ಪೂಜೆ ಮಾಡಿದರೆ ಉತ್ತಮ. ಹಸಿ ಹಾಲು, ಸಕ್ಕರೆ, ತುಪ್ಪವನ್ನು ನಾಗದೇವರಿಗೆ ನೈವೇದ್ಯವಾಗಿ ನೀಡಿದರೆ ಅತ್ಯಂತ ಶ್ರೇಯಸ್ಕರವಾಗಿದ್ದು ನಿಮ್ಮ ಇಷ್ಟಾರ್ಥಗಳು ನೆರವೆರುತ್ತದೆ.