Select Your Language

Notifications

webdunia
webdunia
webdunia
webdunia

ಅಣ್ಣನ ರಕ್ಷಣೆಗೆ ಈ ಬಣ್ಣದ ರಾಖಿ ಕಟ್ಟಿದರೆ ಶ್ರೇಯಸ್ಸು

raksha bandhana

Sampriya

ಬೆಂಗಳೂರು , ಭಾನುವಾರ, 18 ಆಗಸ್ಟ್ 2024 (13:11 IST)
Photo Courtesy X
ಬೆಂಗಳೂರು: ನಾಳೆ ದೇಶದಾದ್ಯಂತ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯಂದು ತನ್ನ ಅಣ್ಣನ ರಕ್ಷಣೆಗೆ ಸಹೋದರಿಯು ದಾರವನ್ನು ಕಟ್ಟುತ್ತಾಲೆ. ರಕ್ಷಾಬಂಧನ ಹಿನ್ನೆಲೆ ಇದೀಗ ಮಾರುಕಟ್ಟೆಗೆ ನಾನಾ ಬಗೆಯ, ವಿಶೇಷ ವಿನ್ಯಾಸದಲ್ಲಿ ರಾಖಿ ಲಗ್ಗೆಯಿಟ್ಟಿದೆ. ಆದರೆ ರಾಖಿಗಳನ್ನು ಕಟ್ಟುವಾಗ ಆರೋಗ್ಯದ ಹಿತದೃಷ್ಟಿಯನ್ನು ನಾವು ನೋಡಬೇಕು.

ಈ ಲೇಖನದಲ್ಲಿ ಯಾವ ಬಣ್ಣದ ರಾಖಿಯನ್ನು ಸಹೋದರನಿಗೆ ಕಟ್ಟಿದರೆ ಶ್ರೇಯಸ್ಸು ಎಂದು ವಿವರಿಸಲಾಗಿದೆ.  ರೇಷ್ಮೆ ದಾರದಿಂದ ತಯಾರಿಸುವ ರಾಖಿಗಳನ್ನು ಸಹೋದರನಿಗೆ ಕಟ್ಟಿದರೆ ಶ್ರೇಯಸ್ಸು ಎಂದು ಹೇಳಲಾಗುತ್ತದೆ.

ಇನ್ನೂ ವಿಶೇಷವಾಗಿ ಕಪ್ಪು ಬಣ್ಣದ ದಾರವಿರುವ ಅಥವಾ ವಿನ್ಯಾಸವಿರುವ ರಾಖಿಯನ್ನು ಆರಿಸಿಕೊಳ್ಳಬೇಡಿ. ಇದು ಮಾನಸಿಕವಾಗಿ ನಕಾರಾತ್ಮಕತೆ ಗುಣವನ್ನು ನೀಡುತ್ತದೆ.

ಇನ್ನೂ ಹಸಿರು ಅಥವಾ ತಿಳಿ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಹೇಳಲಾಗುತ್ತದೆ.  ಈ ಬಣ್ಣವು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಅದಲ್ಲದೆ ಹಳದಿ ಬಣ್ಣದ ರಾಖಿಯನ್ನು ಕಟ್ಟುವುದರಿಂದಲೂ ಮಾನಸಿಕವಾಗಿ ದೃಢವಾಗಿಸುತ್ತದೆ. ಪುರಾಣಗಳ ಪ್ರಕಾರ ಹಳದಿ ಬಣ್ಣ ಶುಭವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೇಟ್ ಅಳವಡಿಕೆ ಯಶಸ್ವಿ, ತುಂಗಭದ್ರಾ ಅಣೆಕಟ್ಟಿನಲ್ಲಿ ಮತ್ತೇ ಏರುತ್ತಿದೆ ನೀರಿನ ಮಟ್ಟ