ಅಮರಾವತಿ: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದ ಸಿಎಂ ಚಂದ್ರಬಾಬು ನಾಯ್ಡು ಬಡವರಿಗಾಗಿ 5 ರೂ. ಊಟ ನೀಡುವ ಕ್ಯಾಂಟೀನ್ ಗೆ ಮತ್ತೆ ಚಾಲನೆ ನೀಡಿದ್ದಾರೆ. ಇದಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
									
			
			 
 			
 
 			
					
			        							
								
																	ಈ ಹಿಂದೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಅನ್ನ ಕ್ಯಾಂಟೀನ್ ಎಂಬ ಯೋಜನೆ ಜಾರಿಗೆ ತಂದಿದ್ದ ಚಂದ್ರಬಾಬು ನಾಯ್ಡು 5 ರೂ.ಗೆ ಊಟ ಸಿಗುವಂತೆ ಮಾಡಿದ್ದರು. ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಈ ಯೋಜನೆಯಿದೆ.
									
										
								
																	ಆದರೆ ಬಳಿಕ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡು ಜಗನ್ ರೆಡ್ಡಿ ಅಧಿಕಾರಕ್ಕೇರಿದರು. 2019 ರಿಂದ 2024 ರವರೆಗೆ ಜಗನ್ ರೆಡ್ಡಿ ಸಿಎಂ ಆಗಿದ್ದಾಗ ಈ ಯೋಜನೆಯನ್ನು ರದ್ದುಪಡಿಸಲಾಗಿತ್ತು. ಇದೀಗ ಮತ್ತೆ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅನ್ನ ಕ್ಯಾಂಟೀನ್ ಪುನರಾರಂಭ ಮಾಡಲಾಗಿದೆ.
									
											
							                     
							
							
			        							
								
																	ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶಕ್ಕೆ ಅನ್ನ ಕ್ಯಾಂಟೀನ್ ಮತ್ತೆ ಆರಂಭ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ. ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್ ಯೋಜನೆಗೆ ಮರು ಚಾಲನೆ ನೀಡಿದ ಚಂದ್ರಬಾಬು ನಾಯ್ಡು ಸಾಮಾನ್ಯ ನಾಗರಿಕರೊಂದಿಗೆ ಊಟ ಮಾಡಿದ್ದಾರೆ.