ಇನ್ನೇನು ವರ ಮಹಾಲಕ್ಷ್ಮಿ ಹಬ್ಬ ಬರುತ್ತಿದ್ದು, ಪೂಜಾ ದಿನ, ಮುಹೂರ್ತ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ವರಮಹಾಲಕ್ಷ್ಮಿ ಹಬ್ಬದ ನಂತರ ಒಂದಾದ ಮೇಲೊಂದರಂತೆ ಹಬ್ಬಗಳು ಬರುತ್ತಲೇ ಇರುತ್ತವೆ.
2025 ರ ವರಮಹಾಲಕ್ಷ್ಮಿ ಹಬ್ಬ ಇದೇ ಶುಕ್ರವಾರ ಅಂದರೆ ಆಗಸ್ಟ್ 8 ರಂದು ಇದೆ. ಶ್ರಾವಣ ಮಾಸದ ಮಹತ್ವದ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಲಕ್ಷ್ಮೀ ದೇವಿಯನ್ನು ಭಕ್ತಿಯಿಂದ ಪೂಜಿಸುವ ಮೂಲಕ ಜೀವನದಲ್ಲಿ ಸುಖ, ಸಮೃದ್ಧಿ ಬರಲಿ ಎಂದು ಪ್ರಾರ್ಥಿಸುತ್ತೇವೆ.
ಶುಕ್ರವಾರ ಹಲವರು ಮನೆಯಲ್ಲಿ ಲಕ್ಷ್ಮೀ ದೇವಿಯ ಪ್ರತಿರೂಪ ಕೂರಿಸಿ ಕಲಶವಿಟ್ಟು ಪೂಜೆ ಮಾಡುತ್ತಾರೆ. ಈ ರೀತಿ ಲಕ್ಷ್ಮೀ ದೇವಿಯನ್ನು ಕೂರಿಸಿದರೆ ಮೂರು ಹೊತ್ತೂ ಮಂಗಳಾರತಿ ಮಾಡಿ ಪೂಜೆ ಮಾಡಬೇಕು. ಪೂಜೆ ಮಾಡಲು ಶುಭ ಮುಹೂರ್ತ ಇಲ್ಲಿದೆ.
ಬೆಳಿಗ್ಗಿನ ಪೂಜೆ: ಸಿಂಹ ಲಗ್ನ ಬೆಳಿಗ್ಗೆ 6.29 ರಿಂದ 8.46 ಗಂಟೆಗೆ
ಮಧ್ಯಾಹ್ನ ಪೂಜೆ: ವೃಶ್ಚಿಕ ಲಗ್ನ, 1.22 ರಿಂದ 3.41 ರೊಳಗೆ
ಸಂಜೆ ಪೂಜೆ: ಕುಂಭ ಲಗ್ನ 7.27 ರಿಂದ 8.54 ರವರೆಗೆ