ಬೆಂಗಳೂರು: ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಕೊನೆಗೂ ಆಂಕರ್ ಅನುಶ್ರೀ ಮದುವೆ ನಡೆದಿದೆ. ಇಂದು ಗೆಳೆಯ ರೋಷನ್ ಜೊತೆ ಆಪ್ತರ ಸಮ್ಮುಖದಲ್ಲಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಗ್ಗಲೀಪುರ ಬಳಿ ರೆಸಾರ್ಟ್ ಒಂದರಲ್ಲಿ ಅನುಶ್ರೀ ಮದುವೆ ಕಾರ್ಯಕ್ರಮ ನೆರವೇರಿದೆ. ಇಂದು 10.56 ರ ಸುಮೂಹರ್ತದಲ್ಲಿ ರೋಷನ್-ಅನುಶ್ರೀ ಸತಿಪತಿಗಳಾಗಿದ್ದಾರೆ. ತಾಳಿ ಕಟ್ಟುವ ಶಾಸ್ತ್ರದ ವೇಳೆ ರೋಷನ್ ತಾಳಿ ಸರ ಹಿಡಿದುಕೊಳ್ಳಲು ಕೊಂಚ ಕನ್ ಫ್ಯೂಸ್ ಆದರು. ಆಗ ಅನುಶ್ರೀಯೇ ಗಂಡನ ಕೈ ಹಿಡಿದು ಹೇಗೆ ಹಿಡಿಯಬೇಕು ಎಂದು ಹೇಳಿದ್ದು ಅಲ್ಲಿದ್ದವರ ಮುಖದಲ್ಲೂ ನಗು ಮೂಡಿದೆ.
ತಾಳಿ ಕಟ್ಟಿದಾಗ ಭಾವುಕರಾಗಿ ಅನುಶ್ರೀ ಕಣ್ಣೀರು ಹಾಕಿದ್ದಾರೆ. ಈ ಮದುವೆಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳೂ ಬಂದು ಶುಭ ಹಾರೈಸಿದ್ದಾರೆ. ನಟ ಲವ್ಲಿ ಸ್ಟಾರ್ ಪ್ರೇಮ್, ಕಿಶೋರ್ ಕುಮಾರ್, ಶರಣ್, ಚೈತ್ರಾ ಜೆ ಆಚಾರ್, ಕಾವ್ಯಾ ಶಾ, ಗಾಯಕಿ ಪೃಥ್ವಿ ಭಟ್ ದಂಪತಿ ಸೇರಿದಂತೆ ಸಿನಿ ಸ್ನೇಹಿತರು ಬಂದಿದ್ದಾರೆ.